ಮಸೀದಿ ಕುರಿತ ಫಾರುಕಿ ತೀರ್ಪಿನ ಮರುಪರಿಶೀಲನೆ ಇಲ್ಲ: ಸುಪ್ರೀಂ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯೆ ರಾಮ ಮಂದಿರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ, ಮುಸ್ಲಿಮರ ಪ್ರಾರ್ಥನೆಗೆ ಮಸೀದಿ ಅನಿವಾರ್ಯವಲ್ಲ ಎನ್ನುವ ಮೂಲಕ ಫಾರುಕಿ ತೀರ್ಪನ್ನು ಎತ್ತಿ ಹಿಡಿದಿದೆ.

1994ರ ಇಸ್ಮಾಯಿಲ್ ಫಾರುಕಿ ತೀರ್ಪನ್ನು ಮರುಪರಿಶೀಲಿಸಬೇಕೆ ಎಂಬ ಕುರಿತ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮಸೀದಿ ಕುರಿತು ಫಾರೂಕಿ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದು ತೀರ್ಪು ನೀಡಿದೆ.

ಮಸೀದಿಗಳು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಎನ್ನುವ ಇಸ್ಮಾಯಿಲ್‌ ಫಾರುಕಿ ಅವರ ಅಭಿಪ್ರಾಯವನ್ನು ಇಸ್ಲಾಂ ಧರ್ಮದ ಹಿನ್ನೆಲೆಯಲ್ಲಿ ನೋಡಬೇಕಿಲ್ಲ. ಮಸೀದಿಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಫಾರುಕಿ ಪರಿಶೀಲಿಸಿದ್ದಾರೆ. ಅವರ ತೀರ್ಪು ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರವೇ ಇದೆ. ಪ್ರಾರ್ಥನೆಯ ಸ್ಥಳದಿಂದ ಪ್ರಾರ್ಥನೆಗೆ ಧಕ್ಕೆಯಾಗಬಾರದು. ಅಗತ್ಯಬಿದ್ದಾಗ ದೇಶದ ಯಾವುದೇ ದೇಗುಲ, ಮಸೀದಿ ಮತ್ತು ಚರ್ಚ್‌ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ತಿಳಿಸಿದ್ದಾರೆ.

ಸಹಮತವಿಲ್ಲವೆಂಬ ನ್ಯಾ.ಅಬ್ದುಲ್ ನಜೀರ್ 

ಇಸ್ಮಾಯಿಲ್‌ ಫಾರುಕಿ ಪ್ರಕರಣದ ತೀರ್ಪಿನ ಪ್ರಶ್ನಾರ್ಹ ಅಂಶಗಳು ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ಮೇಲೆ ಪರಿಣಾಮ ಬೀರಿವೆ. ನಮಾಜಿಗೆ ಮಸೀದಿ ಅವಶ್ಯಕವಲ್ಲ ಎಂಬ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ತೀರ್ಪಿಗೆ ನನ್ನ ಸಹಮತವಿಲ್ಲ ಎಂದು ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಹೇಳಿದ್ದಾರೆ.

ಅ. 29ರಿಂದ ಅಯೋಧ್ಯೆ ಹೊಸಪೀಠದಲ್ಲಿ ಅಯೋಧ್ಯೆ ವಿಚಾರಣೆ ನಡೆಯಲಿದೆ.

ಮಸೀದಿ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಅಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು.
ಇಸ್ಲಾಂ, ಮಸೀದಿ ಒಂದಕ್ಕೊಂದು ಬೆಸೆದುಕೊಂಡಿವೆ. ಮಸೀದಿಯನ್ನು ಅವಿಭಾಜ್ಯ ಅಂಗ ಅಲ್ಲ ಎನ್ನಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು 1994ರ ಇಸ್ಮಾಯಿಲ್‌ ಫಾರುಕಿ ತೀರ್ಪನ್ನು 7 ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಿ ಮರುಪರಿಶೀಲನೆ ನಡೆಸಬೇಕು ಎಂದು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದವು.

2010ರಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗವಾಗಿ ವಿಂಗಡಿಸುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. (ಏಜೆನ್ಸೀಸ್)

 

ಅಯೋಧ್ಯಾ ಭೂಮಿ ಯಾರಿಗೆ ಸೇರಿದ್ದು? ಕುತೂಹಲಕಾರಿ ತೀರ್ಪು 28ಕ್ಕೆ ಪ್ರಕಟ

ರಾಮಮಂದಿರ ನಿರ್ಮಾಣವಾಗಲಿ

ಮತ್ತೆ ರಾಮಮಂದಿರ ನಿರ್ಮಾಣ ಅಭಿಯಾನ?

ಅಯೋಧ್ಯೆ ಪ್ರಕರಣ: ಅಂತಿಮ ವಿಚಾರಣೆ ಸು.ಕೋರ್ಟ್​​ನಲ್ಲಿ ಆರಂಭ