10% ಮೀಸಲಿನ ಸಾಂವಿಧಾನಿಕ ಮಾನ್ಯತೆ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು​; ವಿವರಣೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್​

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಕಲ್ಪಿಸುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್​ ಪರಿಶೀಲಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ. ಆದರೆ, ಕಾನೂನು ಜಾರಿಗೆ ತಡೆ ನೀಡಲು ಸುಪ್ರೀಂ ನಿರಾಕರಿಸಿದೆ.

ನ್ಯಾಯಾಲಯದ ನೋಟಿಸ್​ಗೆ ಇನ್ನು ನಾಲ್ಕು ವಾರಗಳಲ್ಲಿ ವಿವರಣೆ ನೀಡಬೇಕು ಎಂದೂ ಸುಪ್ರೀಂ ಕೋರ್ಟ್​ ತಿಳಿಸಿದೆ. ಈ ಕಾನೂನನ್ನು ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ಅವರನ್ನು ಒಳಗೊಂಡ ಪೀಠ ಪರಿಶೀಲನೆ ನಡೆಸಲಿದೆ ಎಂದು ಕೋರ್ಟ್​ ತಿಳಿಸಿದೆ.
10% ಮೀಸಲು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ನ ಪೀಠ ಇಂದು ವಿಚಾರಣೆ ನಡೆಸಿತು.
ಮೀಸಲು 50% ಕ್ಕಿಂತಲೂ ಹೆಚ್ಚಿರಬಾರದು ಎಂದು ಸುಪ್ರೀಂ ಕೋರ್ಟ್​ ಮಿತಿ ವಿಧಿಸಿದೆ. ಆದರೆ, ಸದ್ಯದ ಕಾನೂನಿನಿಂದಾಗಿ ಆ ಮಿತಿ ಮೀರಲಿದೆ. ಅಲ್ಲದೆ, 1992ರ ಮಂಡಲ್​ ಆಯೋಗದ ಪ್ರಕಾರ ಮೀಸಲಾತಿಗೆ ಆರ್ಥಿಕ ಸ್ಥಿತಿಗತಿ ಮಾನದಂಡವಲ್ಲ. ಹೀಗಾಗಿ ಈ ಕಾನೂನು ಅಸಾಂವಿಧಾನಿಕ ಎಂಬುದು ಅರ್ಜಿದಾರರ ವಾದ. ಇದನ್ನೇ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.