ನವದೆಹಲಿ: ಲಾಕ್ಡೌನ್ನಿಂದಾಗಿ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಅವರ ಊರುಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ರಾಜ್ಯಗಳ ಕೋರಿಕೆಯ ಮೇರೆಗೆ, 24 ಗಂಟೆಗಳೊಳಗೆ ವಿಶೇಷ ಶ್ರಮಿಕ್ ರೈಲುಗಳನ್ನು ಒದಗಿಸುವಂತೆ ಅದು ಭಾರತೀಯ ರೈಲ್ವೆಗೂ ಸೂಚಿಸಿದೆ.
ಇದನ್ನೂ ಓದಿ : ಒಬ್ಬರಲ್ಲ, 26 ‘ಅನಾಮಿಕ’ರು ಬಲೆಗೆ; ಉತ್ತರಪ್ರದೇಶದಲ್ಲಿ ನಡೆದಿದೆ ಕರ್ನಾಟಕದಂಥದ್ದೇ ಶಿಕ್ಷಕರ ನೇಮಕಾತಿ ಹಗರಣ
ಹಿಂತಿರುಗಿದ ಕಾರ್ಮಿಕರಿಗಾಗಿ ಉದ್ಯೋಗ ಯೋಜನೆಗಳನ್ನು ಪಟ್ಟಿ ಮಾಡಲು ಹಾಗೂ ಕಾರ್ಮಿಕರು ವಿವಿಧ ಯೋಜನೆಗಳ ಮಾಹಿತಿ ಹಾಗೂ ಲಾಭ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ತಾಲ್ಲೂಕು/ ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯಲು ಕೋರ್ಟ್ ತಿಳಿಸಿದೆ.
ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಮತ್ತು ತಮ್ಮ ಮೂಲ ಉದ್ಯೋಗದ ಸ್ಥಳಕ್ಕೆ ಮರಳಲು ಬಯಸುವವರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ.
ಇದನ್ನೂ ಓದಿ: ಕರೊನಾ ಟೆಸ್ಟ್ ಮಾಡಿಸಿಕೊಂಡ ಕೇಜ್ರಿವಾಲ್: ವರದಿ ಬರುವವರೆಗೂ ಡವಡವ
ಇದನ್ನೂ ಓದಿ: ಪೆಟ್ಟಿಗೆಯಲ್ಲಿತ್ತು ಅಪರಿಚಿತ ಮಹಿಳೆ ಶವ : ಕೊಲೆ ಪ್ರಕರಣ ದಾಖಲು
ದೇಶದಲ್ಲಿ ಕಾರ್ಮಿಕರು ಪಡುತ್ತಿರುವ ಕಷ್ಟ, ಅವರಿಗೆ ಎದುರಾದ ಅವ್ಯವಸ್ಥೆ ಬಗೆಗಿನ ಸುಮೊಟೊ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ವಲಸೆ ಕಾರ್ಮಿಕರನ್ನು ಅವರ ಹುಟ್ಟೂರಿಗೆ ಕಳಿಸಲು ಇನ್ನು 15 ದಿನ ಸಾಕಾಗುತ್ತದೆ ಎಂದು ಜೂನ್ 5 ರಂದು ತಿಳಿಸಿತ್ತು.
ಇದನ್ನೂ ಓದಿ: ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ: ಸಿಬಿಎಸ್ಸಿಗೆ ಬಗೆಹರಿಯದ ಗೊಂದಲ
ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳಿಸುವ ಕೆಲಸಕ್ಕೆ ಇನ್ನು 15 ದಿನಗಳ ಗಡುವು ಕೊಡುತ್ತಿದ್ದೇವೆ. ಹೀಗೆ ಮರಳಿ ತಮ್ಮ ರಾಜ್ಯಗಳಿಗೆ ಹೋದ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಹೇಗೆ ಉದ್ಯೋಗ ಸೇರಿ ಮತ್ತಿತರ ವ್ಯವಸ್ಥೆ, ನೆರವು ನೀಡಿವೆ ಎಂಬುದಕ್ಕೆ ದಾಖಲೆ ನೀಡಬೇಕು. ವಲಸಿಗರ ನೋಂದಣಿ ಕಡ್ಡಾಯವಾಗಿ ಆಗಲೇಬೇಕು ಎಂದು ಕೂಡ ಸುಪ್ರೀಂಕೋರ್ಟ್ ಹೇಳಿತ್ತು.
ಕರೊನಾ ರೋಗಿಗಳಿಗಿನ್ನು ಮನೆಯೇ ಆಸ್ಪತ್ರೆ; ಕಾಸಿಗೆ ತಕ್ಕ ಟ್ರೀಟ್ಮೆಂಟ್ ಪ್ಯಾಕೇಜ್