ಸುಪ್ರೀಂಕೋರ್ಟ್​ನಲ್ಲಿ ಇಪಿಎಫ್​ಒಗೆ ಹಿನ್ನಡೆ: ಖಾಸಗಿ ವಲಯದ ಉದ್ಯೋಗಿಗಳಿಗೂ ಸಿಗಲಿದೆ ಭಾರಿ ಮೊತ್ತದ ಪಿಂಚಣಿ

ನವದೆಹಲಿ: ಖಾಸಗಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತದ ಪಿಂಚಣಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತದ ಪಿಂಚಣಿ ನೀಡುವಂತೆ ಸೂಚಿಸಿ ಕೇರಳ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್​ಒ) ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ.

ಪ್ರಸಕ್ತ ಇರುವಂತೆ ಉದ್ಯೋಗಿಗಳ ವೇತನದಿಂದ ಕಡಿತಗೊಳಿಸುವ ಮೊತ್ತವನ್ನು ಆಧರಿಸಿ, ನಿವೃತ್ತಿ ಹೊಂದಿದ ಬಳಿಕ ಗರಿಷ್ಠ 15 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದೆ. ಇದರ ಬದಲು ನಿವೃತ್ತಿ ಹೊಂದುವಾಗ ಉದ್ಯೋಗಿಗಳು ಪಡೆಯುತ್ತಿರುವ ಸಂಬಳದ ಪೂರ್ಣ ಮೊತ್ತವನ್ನು ಆಧರಿಸಿ, ಪಿಂಚಣಿ ನೀಡುವಂತೆ ಕೇರಳ ಹೈಕೋರ್ಟ್​ ಇಪಿಎಫ್​ಒಗೆ ಸೂಚಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಇಪಿಎಫ್​ಒ ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇಪಿಎಫ್​ಒನ ವಿಶೇಷ ಮೇಲ್ಮನವಿಯಲ್ಲಿ ಹುರುಳಿಲ್ಲ ಎಂದು ಹೇಳಿ ಸುಪ್ರೀಂಕೋರ್ಟ್​ ಅದನ್ನು ತಿರಸ್ಕರಿಸಿದೆ.

ಸುಪ್ರೀಂಕೋರ್ಟ್​ನ ಈ ನಿರ್ದೇಶನದ ಪ್ರಕಾರ 33 ವರ್ಷ ಕೆಲಸ ಮಾಡಿದ್ದು, ನಿವೃತ್ತಿ ಹೊಂದುವಾಗ 50 ಸಾವಿರ ರೂ. ವೇತನ ಪಡೆಯುತ್ತಿರುವ ಉದ್ಯೋಗಿಗೆ ಹಾಲಿ ಸಿಗುತ್ತಿದ್ದ 5,180 ಸಾವಿರ ರೂ. ಪಿಂಚಣಿ ಬದಲು ಮಾಸಿಕ 25 ಸಾವಿರ ರೂ. ಪಿಂಚಣಿ ದೊರೆಯಲಿದೆ. 30 ವರ್ಷ ಕೆಲಸ ಮಾಡಿದ್ದವರಿಗೆ 4,525 ರೂ. ಬದಲು 22,857 ರೂ., 25 ವರ್ಷ ಕೆಲಸ ಮಾಡಿದ್ದವರಿಗೆ 3,425 ರೂ. ಬದಲು 19,225 ರೂ., 20 ವರ್ಷ ಕೆಲಸ ಮಾಡಿದ್ದವರಿಗೆ 2,100 ರೂ. ಬದಲು 14,285 ರೂ. ಪಿಂಚಣಿ ಸಿಗಲಿದೆ.

ಅಂತೆಯೇ ಮಾಸಿಕ 1 ಲಕ್ಷ ರೂ. ವೇತನದಾರರು 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ 5,180 ರೂ. ಬದಲು 50 ಸಾವಿರ, 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೆ 4,525 ರೂ. ಬದಲು 45,714 ರೂ., 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ 3,425 ರೂ. ಬದಲು 38,571 ರೂ. ಹಾಗೂ 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ 2,100 ರೂ. ಬದಲು ಮಾಸಿಕವಾಗಿ 28,571 ರೂ. ಪಿಂಚನೆ ದೊರೆಯಲಿದೆ. (ಏಜೆನ್ಸೀಸ್​)

10 Replies to “ಸುಪ್ರೀಂಕೋರ್ಟ್​ನಲ್ಲಿ ಇಪಿಎಫ್​ಒಗೆ ಹಿನ್ನಡೆ: ಖಾಸಗಿ ವಲಯದ ಉದ್ಯೋಗಿಗಳಿಗೂ ಸಿಗಲಿದೆ ಭಾರಿ ಮೊತ್ತದ ಪಿಂಚಣಿ”

 1. It is a good decision. Thanks for the Judgement. But, I have my own doubt that, will it be implemented. If so, from what date will take this effect.

 2. Great Judgement….!!
  Thanks to supreme court….!!
  Private sector Employees are also Nation Builders….!! How can the supreme court ignore them.
  After all they were getting a meager pension which was not sufficient even for their Monthly Medicine Expencess ,
  & after all How many years of Average pension they enjoy (not more than 10 Yrs) ?
  We well come the verdict…..
  We love India….!!

 3. It’s a good decision we should selute honorable Judge. Actually everybody required money support after retirement, for medical and normal routine life to maintain independent. Every body should not depend on their kids.Once again we selute honorable Judge they knows life how to deal after retirement. Thank you sir

 4. Yes really appreciated the initiative.. One should know that major amount of tax generated by private employees.. It is a real justice to private employees..
  Thanks to once again to our Judiciary system.

 5. Really great sir hats of to our honourable judge who have given good judgement.
  I thanks a lot to place of Supreme Court once again great great ever great.

 6. Good Decision by Honourable Supreme Court.Great relief to all families those who are getting very less pension.But we have to see from which date it will be implemented.In this matter if any one comes to know any thing pl share

 7. Once again thanks for honorable judges to give historic judgement and we r relief from ur judgement but I have one small question in My mind that is how long that pention will carry after retirement pls clarify , thank you very much

 8. Yes it’s good news for all thanks for the taking this decision but I have doubt about its applicable only on Kerala govt or all over indiaa

Comments are closed.