More

    ಸುಪ್ರೀಂ ಕೋರ್ಟ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಲ್ಲಿಕೆಯಾಗಿರುವ 144 ಅರ್ಜಿಗಳ ವಿಚಾರಣೆ ನಾಳೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ ಕಾಯ್ದೆ) ಕುರಿತು ಸಲ್ಲಿಸಲಾಗಿರುವ 144 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ಬುಧವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

    ಸಲ್ಲಿಕೆಯಾಗಿರುವ ಬಹುತೇಕ ಅರ್ಜಿಗಳು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದರೆ ಕೆಲವೇ ಅರ್ಜಿಗಳು ಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಸಲ್ಲಿಕೆಯಾಗಿವೆ.

    2019 ರ ಡಿಸೆಂಬರ್ 18ರ ವರೆಗೆ 60 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಲ್ಲದೆ ಹೈಕೋರ್ಟ್​ಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕೇಂದ್ರ ಸರ್ಕಾರ ಕಾಯ್ದೆ ವಿರುದ್ಧ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್​ಗೆ ವರ್ಗಾಯಿಸುವಂತೆ ಮನವಿ ಮಾಡಿತ್ತು.

    ಕೇಂದ್ರ ಸರ್ಕಾರ ಮತ್ತು ಅದರ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ನ್ಯಾಯಾಲಯ ನೋಟಿಸ್ ನೀಡಿದಾಗ ಈ ಅರ್ಜಿಗಳು ಮೊದಲು ಉನ್ನತ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದವು. ಅಷ್ಟೊತ್ತಿಗೆ 60 ಬೆಸ ಅರ್ಜಿಗಳನ್ನು ಮಾತ್ರ ಸಲ್ಲಿಸಲಾಗಿತ್ತು.

    ಸಂಸತ್ತು ಡಿಸೆಂಬರ್ 12ರಂದು ಪೌರತ್ವ ಕಾಯ್ದೆಯ ಸೆಕ್ಷನ್​ 2ಕ್ಕೆ ತಿದ್ದುಪಡಿ ತಂದು ಅದರಲ್ಲಿ ಅಕ್ರಮ ವಲಸಿಗರು ಯಾರು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಹಿಂದು, ಸಿಖ್, ಬೌದ್ಧ, ಜೈನ್, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಿಗೆ ಪೌರತ್ವ ನೀಡುವುದೇ ಆಗಿದೆ. ಈ ಪಟ್ಟಿಯಿಂದ ಮುಸ್ಲಿಂ ಸಮುದಾಯವನ್ನು ಕೈಬಿಟ್ಟಿರುವುದಕ್ಕೆ ರಾಷ್ಟ್ರ ವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ.

    ಭಾರತೀಯ ಪೌರತ್ವವನ್ನು ಅರ್ಜಿದಾರರ ಧರ್ಮದೊಂದಿಗೆ ಜೋಡಿಸಿದ್ದು ಇದೇ ಮೊದಲು ಹೀಗಾಗಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts