More

    ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

    ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಸಕ್ತ ರಾಜ್ಯ ಸರ್ಕಾರ ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ನೌಕರರ ಪರವಾಗಿ 4 ಪ್ರಮುಖ ಆದೇಶಗಳನ್ನು ಮಾಡಿದೆ. ನೌಕರರ ಮೇಲೆ ಮೂಕರ್ಜಿಗಳ ಮೂಲಕ ದೂರು ದಾಖಲಿಸಿದರೆ, ಅಂಥ ಪ್ರಕರಣಗಳ ವಿಚಾರಣೆ ನಡೆಸಬಾರದು ಎಂದರು.

    ಸಂಘ ಪ್ರಸ್ತುತ ವರ್ಷ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ವಿುಸಲು ಶಂಕುಸ್ಥಾಪನೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆ ಮಾರ್ಪಡಿಸಲು ಸಚಿವರೊಂದಿಗೆ ರ್ಚಚಿಸಲಾಗಿದೆ. ಎನ್​ಪಿಎಸ್ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿದ್ದೇವೆ. ಎಲ್ಲ ಸರ್ಕಾರಿ ನೌಕರರ ಕುಟುಂಬಗಳಿಗೂ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆಡಳಿತ ನಿರ್ವಹಣೆಗೆ ಬದ್ಧತೆ, ಕ್ರಿಯಾಶೀಲತೆ ಹಾಗೂ ದಕ್ಷತೆಯಿಂದ ಸಹಕರಿಸೋಣ ಎಂದು ಮನವಿ ಮಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಕೆಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ 7 ಜನರು ನೇಮಕವಾಗಿದ್ದಾರೆ. ಅವರಲ್ಲಿ ನಾಲ್ವರು ನಮ್ಮ ತಾಲೂಕಿನವರೆಂಬ ಹೆಮ್ಮೆಯಿದೆ. ಪಟ್ಟಣದಲ್ಲಿ ನೌಕರರ ಸಮುದಾಯ ಭವನ ನಿರ್ವಣಕ್ಕೆ 1 ಕೋಟಿ ರೂ. ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಘಟಕದ ಅಧ್ಯಕ್ಷ ಅಮೃತಗೌಡ ಪಾಟೀಲ, ಶಿಗ್ಗಾವಿಯ ಅರುಣ ಹುಡೇದಗೌಡ್ರ, ಬ್ಯಾಡಗಿಯ ಎಂ.ಎಸ್. ಕಂಬಳಿ, ರಾಣೆಬೆನ್ನೂರಿನ ಎಂ.ಡಿ.ದ್ಯಾವಣ್ಣನವರ, ಇಒ ಚನ್ನಪ್ಪ ರಾಯಣ್ಣನವರ, ಬಿಇಒ ಎಚ್. ಶ್ರೀನಿವಾಸ, ಶಿಕ್ಷಕರ ಸಂಘದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ಅನಿಲ ಗೋಣೆಣ್ಣನವರ, ಶೇಖರ ಹಂಚಿನಮನಿ, ವೆಂಕಟೇಶ ನಾಯಕ, ಚನ್ನಪ್ಪ ಎಂ., ವಿ.ಎಚ್. ಜಾಧವ, ವಿ.ಆರ್. ಪಾಟೀಲ, ಎನ್.ವಿ. ಅಗಸನಹಳ್ಳಿ, ಸಿ.ಜಿ. ಪಾಟೀಲ ವೇದಿಕೆಯಲ್ಲಿದ್ದರು. ಶಿವಾನಂದ ನಾಯಕ ಪ್ರಾಸ್ತಾವಿಕ ಮಾತನಾಡಿದರು, ಸಹದೇವ ದೊಡ್ಡಮನಿ ಸ್ವಾಗತಿಸಿದರು. ನಾಗರಾಜ ಬಂಡಿವಡ್ಡರ ನಿರೂಪಿಸಿದರು.

    ಪುರಸ್ಕಾರ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಿಂಧು ಹಾವೇರಿ, ಧನಲಕ್ಷ್ಮೀ ಹುಣಸಿಕಟ್ಟಿ, ಕಾವ್ಯಾ ಮುದಿಗೌಡ್ರ, ಎಲ್.ಸಿ. ವಿದ್ಯಾಶ್ರೀ, ಮಮ್ಹದ್​ಶಕೀಲ ಗುಲಾಮಲಿಷಾನವರ, ಮದಿಯಾಬಾನು ಲೋಹಾರ, ಹಾಗೂ ಮಹೇಶ್ವರಿ ನಾರನವರ, ರವಿ ಕೋಟಿ, ಅನ್ನಪೂರ್ಣ ಅಸವಾಲೆ, ಸಾವಿತ್ರಿ ಹಿರೂರ, ಮಹೇಜಬಿನ್ ಶೇಖ, ಸಂತೋಷ ಬಳಿಗಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts