blank

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ಜೋಳ ಖರೀದಿಸಲು ರೈತರ ನೋಂದಣಿ ಕೇಂದ್ರ ಆರಂಭ

Gonvala Jawara Dry

ಯಾದಗಿರಿ : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300/- ಹಾಗೂ ‘ಎ’ ಗ್ರೇಡ್ ಪ್ರತಿಕ್ವಿಂಟಾಲ್‌ಗೆ ರೂ.2320/-ರಂತೆ ಮತ್ತು ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್‌ಗೆ ರೂ. 3371/- ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ ರೂ.3421/- ಖರೀದಿಸಲು ಈ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರು ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಯಾದಗಿರಿ, (ನೊಂದಣಿ ಕೇಂದ್ರ),ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಸುರಪೂರ ಸಗಟು ಮಳಿಗೆ, ವೆಂಕಟಾಪುರ, (ನೋಂದಣಿ ಕೇಂದ್ರ), ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಆವರಣ ಶಹಾಪೂರ, (ನೋಂದಣಿ ಕೇಂದ್ರ), ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಟಿ.ಎ.ಪಿ.ಸಿ.ಎಂ.ಎಸ್. ಆವರಣ (ಮಹಾದೇವಪ್ಪ ಬಳೆ ಕಲ್ಯಾಣ ಮಂಟಪ ಎದುರುಗಡೆ, ತಾಳಿಕೋಟೆ ರಸ್ತೆ), (ನೋಂದಣಿ ಕೇಂದ್ರ) ಹುಣಸಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಾಯ್ಕಲ್ ಗ್ರಾಮ, (ನೋಂದಣಿ ಕೇಂದ್ರ).

ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ ಎಂಬ ತಂತ್ರಾAಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು, ಒಂದು ವೇಳೆ ಫ್ರೂಟ್ ತಂತ್ರಾAಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾAಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ.

ಸರ್ಕಾರದ ಆದೇಶ ಸಂಖ್ಯೆ ಆನಾಸ ಆರ್‌ಪಿಆರ್ 2024 (ಇ-ಆಫೀಸ್) ಬೆಂಗಳೂರು ರವರ ದಿನಾಂಕ 26.11.2024 ರ ಸರ್ಕಾರದ ಆದೇಶ ಪ್ರಕಾರ ಈ ಕೆಳಕಂಡ ಹೆಚ್ಚುವರಿ ಮಾರ್ಗ ಸೂಚಿಗಳನ್ನು ಹೊರಡಿಸಿರುತ್ತಾರೆ. ಮಾರ್ಗ ಸೂಚಿಸಗಳು ಈ ಕೆಳಗಿನಂತೆ ಇರುತ್ತವೆ. ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನAತೆ ಪ್ರತಿ ರೈತರಿಂದ ಗರಿಷ್ಟ 50 ಕ್ವಿಂಟಾಲ್ ಖರೀದಿಸುವುದು. ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನAತೆ ಪ್ರತಿ ರೈತರಿಂದ ಗರಿಷ್ಟ 150 ಕ್ವಿಂಟಾಲ್ ಬಿಳಿಜೋಳವನ್ನು ಖರೀದಿಸುವುದು. ಭತ್ತವನ್ನು ರೈತರು ಅವರ ಚೀಲಗಳಲ್ಲಿ ತಂದು ಖರೀದಿ ಕೇಂದ್ರಗಳಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್ ಚೀಲಕ್ಕೆ ರೂ 6/-ರಂತೆ ಖರೀದಿ ಏಜೆನ್ಸಿಗಳು ರೈತರಿಗೆ ಪಾವತಿಸಬೇಕು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಖರೀದಿಸಬೇಕಾಗಿರುವುದರಿಂದ ರೈತ ಭಾಂದವರು ನೊಂದಣಿ ಕೇಂದ್ರಗಳಲ್ಲಿ ದಿನಾಂಕ: 15-11-2024 ರಿಂದ 31.12.2024 ರ ವರೆಗೆ ನೊಂದಣಿ ಮಾಡಿಕೊಳ್ಳಲಾಗುವುದು ಹಾಗೂ ದಿನಾಂಕ 01.01.2025 ರಿಂದ 31.03.2025 ರ ಅವಧಿಯವರೆಗೆ ಭತ್ತ ಖರೀದಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಇವರ ದೂ.ಸಂ.9844600893 ಹಾಗೂ ತಾಲ್ಲೂಕು ಖರೀದಿ ಕೇಂದ್ರಗಳ ಮೇಲ್ವಿಚಾರಕರುಗಳಾದ ಯಾದಗಿರಿ ತಾಲ್ಲೂಕು ಶ್ರೀ ವಿಠ್ಠಲ್ ಬಂದಾಳ ಮೊ.ನಂ.8971236664, ಶಹಾಪೂರ ತಾಲ್ಲೂಕು ಶ್ರೀ ಬಸವರಾಜ ಪತ್ತಾರ ಮೊ.ನಂ.8861819836, ಸುರಪೂರ ತಾಲ್ಲೂಕು ಶ್ರೀ ಆದಯ್ಯ ಹಿರೇಮಠ ಮೊ.ನಂ.8660813747, ಹುಣಸಗಿ ತಾಲ್ಲೂಕು ಶ್ರೀ ಸಿ.ಎಸ್.ರಾಜು ಮೊ.ನಂ.9632659336 ಹಾಗೂ ನಾಯ್ಕಲ್ ಹೋಬಳಿ ಶ್ರೀ ನಯೀಮ ಅಹ್ಮದ್ ಮೊ.ನಂ.6361852251ಗೆ ಸಂಪರ್ಕಿಸಬಹುದು ಜಿಲ್ಲೆಯ ರೈತಭಾಂದವರು ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…