ಸೂಪರಿಂಟೆಂಡೆಂಟ್ ಕಿರುಕುಳಕ್ಕೆ ಬೇಸತ್ತು ವಿಮ್ಸ್‌ ಆಸ್ಪತ್ರೆಯ ನರ್ಸ್‌ ಆತ್ಮಹತ್ಯೆ ಯತ್ನ

ಬಳ್ಳಾರಿ: ಸೂಪರಿಂಟೆಂಡೆಂಟ್ ಕಿರುಕುಳಕ್ಕೆ ಬೇಸತ್ತು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ನಸ್೯ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

20 ವರ್ಷಗಳಿಂದ ಸೂಪರಿಂಟೆಂಡೆಂಟ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರತ್ನಮ್ಮ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹಣ ನೀಡಿದವರಿಗೆ ಮಾತ್ರ ವಾಡ್೯ ಪ್ರಕಾರ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದರು. ವಿನಾಕರಣ ಕೆಲಸದ ಶಿಫ್ಟ್‌ ಬದಲಿಸಿ ಮನೆಗೆ ಬರುವಂತೆ ಕಣ್ಸನ್ನೆ ಮಾಡಿ ಕರೆಯುತ್ತಿದ್ದರು. ವಿಮ್ಸ್ ಅಧಿಕಾರಿಗಳು ಕೂಡ ಇವರೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ರತ್ನಮ್ಮ ಆರೋಪಿಸಿದ್ದಾರೆ.

ಈ ಕುರಿತು ಸೂಪರಿಂಟೆಂಡೆಂಟ್ ಸಂಪತ್ ಕುಮಾರ್ ಪ್ರತಿಕ್ರಿಯಿಸಿ, ನಸ್೯ ರತ್ನಮ್ಮರವರನ್ನು ವಾಡ್೯ ಬದಲಾಯಿಸುವ ವಿಷಯದಲ್ಲಿ ಮೇಲಾಧಿಕಾರಿಗಳ ಆದೇಶದಂತೆ ನಿಯೋಜಿಸಲಾಗಿದೆ. ನಾನು ಯಾವುದೇ ಕಿರುಕುಳ ನೀಡುತ್ತಿಲ್ಲ. ಆರೋಪ ಸತ್ಯಕ್ಕೆ ದೂರವಾಗಿದ್ದು, ರಜೆ ವಿಷಯದಲ್ಲಿ ರತ್ನಮ್ಮ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)