ಜನ್ಮದಿನದಂದು ಹೊಸ ಪಕ್ಷ ಲೋಕಾರ್ಪಣೆ ಮಾಡಲಿರುವ ಉಪೇಂದ್ರ

ಬೆಂಗಳೂರು: ಕಳೆದ ವರ್ಷದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿದ್ದ ರಿಯಲ್​ ಸ್ಟಾರ್​ ಉಪೇಂದ್ರ ಅವರು ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ಹೊರ ಬಂದಿದ್ದು ಈಗ ಇತಿಹಾಸ. ಈಗ ಮತ್ತೊಂದು ಹೊಸ ಪಕ್ಷವನ್ನು ಸ್ಥಾಪಿಸಲು ಉಪೇಂದ್ರ ಅವರು ಸಿದ್ಧತೆ ನಡೆಸಿದ್ದು, ತಮ್ಮ ಜನ್ಮದಿನವಿದ್ದು ಪಕ್ಷವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸೆಪ್ಟೆಂಬರ್​ 18ರಂದು ಉಪೇಂದ್ರ ಅವು ಉತ್ತಮ ಪ್ರಜಾಕೀಯ ಪಾರ್ಟಿಯನ್ನು (UPP) ಲೋಕಾರ್ಪಣೆ ಮಾಡಲಿದ್ದಾರೆ. ಉಪೇಂದ್ರ ಅವರು ಈಗಾಗಲೇ ಹೊಸ ಪಕ್ಷ ಸ್ಥಾಪಿಸುತ್ತಿರುವ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಜನ್ಮದಿನದಂದು ಅವರು ಅಧಿಕೃತವಾಗಿ ಪಕ್ಷವನ್ನು ಲಾಂಚ್​ ಮಾಡಲಿದ್ದಾರೆ.