ನೂತನ ಆಸ್ಪತ್ರೆ ಲೋಕಾರ್ಪಣೆ ಇಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿಯಿಂದ ಇಲ್ಲಿನ ಕಿಮ್್ಸ ಆಸ್ಪತ್ರೆಯನ್ನು ಮಾ. 6ರಂದು ಬೆಳಗ್ಗೆ 11ಗಂಟೆಗೆ ಲೋಕಾರ್ಪಣೆಗೊಳಿಸುವರು ಎಂದು ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ. ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನೇರ ವೀಕ್ಷಣೆಗೆ ವೇದಿಕೆ ನಿರ್ವಿುಸಿದ್ದು, ಎಲ್ಲ ಜನಪ್ರತಿನಿಧಿಗಳು ಆಗಮಿಸುವರು ಎಂದರು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ-3 ಅಡಿ 120 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 30 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆ ನಿರ್ವಿುಸಲಾಗಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಎಚ್​ಎಲ್​ಎಲ್-ಹೈಟ್ಸ್ ಕಂಪನಿ ನಿರ್ವಹಣೆ ಮಾಡಲಿದೆ. ನಾಸಿಕ್ ಮೂಲದ ಹರ್ಷ ಕನ್​ಸ್ಟ್ರಕ್ಷನ್ 1 ಲಕ್ಷ 70 ಸಾವಿರ ಚದರಡಿ ವಿಸ್ತ್ರೀರ್ಣದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಿದೆ. 200 ಬೆಡ್​ಗಳ ಆಸ್ಪತ್ರೆ ಇದಾಗಿದೆ. ನೆಲ ಮಹಡಿಯಲ್ಲಿ ಆಡಳಿತ ಕಚೇರಿ, ಹಣಕಾಸು ಕಚೇರಿ, ಮೊದಲ ಮಹಡಿಯಲ್ಲಿ ನ್ಯೂರೊಲಜಿ, ನ್ಯೂರೊ ಸರ್ಜರಿ, ಎರಡನೇ ಮಹಡಿ ಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋ ಎಂಡೋಲಜಿ, ಮೆಡಿಕಲ್ ಅಂಕಾಲಜಿ, ಮೂರನೇ ಮಹಡಿಯಲ್ಲಿ ನೆಫ್ರೋಲಜಿ, ಯೂರೊಲಜಿ, ನಾಲ್ಕನೇ ಮಹಡಿಯಲ್ಲಿ ಮಕ್ಕಳ ವಿಭಾಗ, ಪ್ಲಾಸ್ಟಿಕ್ ಸರ್ಜರಿ ವಿಭಾಗಗಳು ಇರಲಿವೆ. ಐದನೇ ಮಹಡಿ ಯಲ್ಲಿ 6 ಮಾದರಿಯ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ ಹಾಗೂ 40 ಐಸಿಯು ಬೆಡ್​ಗಳು ಇರಲಿವೆ ಎಂದರು.

ಕೆಲ ಕಾಮಗಾರಿ ಬಾಕಿ ಇದ್ದು, ಏಪ್ರಿಲ್ ತಿಂಗಳೊಳಗೆ ಪೂರ್ಣಗೊಂಡು ಜನರ ಸೇವೆಗೆ ಸಿದ್ಧವಾಗಲಿದೆ. ಸದ್ಯ 25 ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುವರು. ಸುಮಾರು 35 ತಜ್ಞ ವೈದ್ಯರು ಸೇರಿ 600 ಸಿಬ್ಬಂದಿ ಅಗತ್ಯವಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆಯ ಒಪ್ಪಿಗೆ ಸಿಗಬೇಕಿದೆ. ಇವೆಲ್ಲ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೂಪರ್ ಸ್ಪೆಷಾಲಿಟಿ ವಿಶೇಷ ಅಧಿಕಾರಿ ಡಾ.ಎಸ್.ಎಸ್. ಶಿರೋಳ, ನೋಡಲ್ ಅಧಿಕಾರಿ ಡಾ. ಅರವಿಂದ್, ಕಿಮ್್ಸ ಪ್ರಭಾರಿ ಪ್ರಾಚಾರ್ಯ ಡಾ.ಎಂ.ಸಿ. ಚಂದ್ರು,

ಡಾ. ಕೆ.ಎಫ್. ಕಮ್ಮಾರ, ಮುಖ್ಯ ಆಡಳಿತಾಧಿಕಾರ ಬಸವರಾಜ ಸೋಮಣ್ಣವರ, ಭದ್ರತಾ ಅಧಿಕಾರಿ ಜಿ.ಬಿ. ದೇಸೂರ ಇದ್ದರು.