ಸಹಕಾರಿ ಸಂಘಗಳು ರೈತರ ಬೆನ್ನೆಲುಬು

ಸಾವಳಗಿ: ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕ್​ಗಳು ಆ ಮೂಲಕ ಗ್ರಾಮೀಣ ಪ್ರದೇಶದ ಅರ್ಥ ವ್ಯವಸ್ಥೆಗೆ ಚೈತನ್ಯ ನೀಡಿವೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೂಪರ್ ಮಾರ್ಕೆಟ್ ಹಾಗೂ ಸಭಾಭವನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಸಾಲಮನ್ನಾ ಮಾಡುವರೆಂಬ ಉದ್ದೇಶದಿಂದ ರೈತರು ಸಹಕಾರಿ ಬ್ಯಾಂಕ್​ನಲ್ಲಿ ಖಾತೆ ತೆರೆಯಬಾರದು. ನಿತ್ಯದ ವ್ಯವಹಾರದ ಮೂಲಕ ಬ್ಯಾಂಕಿನ ಸೌಲಭ್ಯ ಉಪಯೋಗಿಸಿಕೊಳ್ಳಬೇಕು. ಸೌಲಭ್ಯ ಪಡೆದ ರೈತರು ನಿಯಮಿತವಾಗಿ ಸಾಲ ಮರುಪಾವತಿ ಮಾಡಬೇಕು. ಹೊಂದಾಣಿಕೆಯಿಂದ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ ಎಂಬುದನ್ನು ಸಾವಳಗಿ ಸಹಕಾರಿ ಬ್ಯಾಂಕ್ ತೋರಿಸಿಕೊಟ್ಟಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಮಖಂಡಿ ಓಲೆಮಠದ ಡಾ.ಅಭಿನವಕುಮಾರ ಚನ್ನಬಸವ ಶ್ರೀಗಳು ಮಾತನಾಡಿ, ಮೊದಲು ಸಂಗ್ರಹಿಸುವುದು, ಸಂಗ್ರಹಿಸಿರುವುದನ್ನು ರಕ್ಷಿಸುತ್ತ ಸೂಕ್ತ ರೀತಿಯಲ್ಲಿ ವಿತರಿಸುವುದು. ನಂತರ ಅದನ್ನು ಬೆಳೆಸುತ್ತ ಯಶಸ್ಸು ಗಳಿಸುವುದೇ ಸಹಕಾರಿ ಕ್ಷೇತ್ರದ ಸೂತ್ರವಾಗಿದೆ ಎಂದರು.

ಚಂದ್ರಗುಪ್ತ ಬೆಳಗಲಿ ಮಾತನಾಡಿದರು. ಅಭಯಕುಮಾರ ನಾಂದ್ರೇಕರ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಪಾರ್ಶ್ವನಾಥ ಉಪಾಧ್ಯ ಮಾತನಾಡಿದರು.

ತಾಪಂ ಅಧ್ಯಕ್ಷೆ ಎನ್.ಎಚ್. ಕುರಣಿ, ಸತಗೌಡ ನ್ಯಾಮಗೌಡ, ಎಸ್.ಎಸ್. ಮಿರ್ಜಿ, ರಮೇಶ ಮಾನೋಜಿ, ತಾಯವ್ವ ಕಂಕಣವಾಡಿ, ಮಲ್ಲಿಕಾರ್ಜುನ ಬುಲಗೌಡ, ಬಾಪುಗೌಡ ಬುಲಗೌಡ, ತಾಪಂ ಸದಸ್ಯ ಬಸವರಾಜ ಮಾಳಿ, ಪುಲಿಕೇಶಿ ನಾಂದ್ರೇಕರ ಇತರರಿದ್ದರು. ವಿಠಲ ಉಮರಾಣಿ ಸ್ವಾಗತಿಸಿದರು. ಬಸವರಾಜ ಕನಾಳ ನಿರೂಪಿಸಿದರು. ರೋಹಿಣಿ ಸಬಕಾಳೆ, ಭಾಗ್ಯಶ್ರೀ ಯಡವನ್ನವರ ವಂದಿಸಿದರು.