ಡೇವಿಡ್​ ವಾರ್ನರ್​ ಭರ್ಜರಿ ಕಮ್​ಬ್ಯಾಕ್​: ಕೆಕೆಆರ್​ಗೆ 182 ರನ್​ ಗುರಿ ನೀಡಿದ ಸನ್​ರೈಸರ್ಸ್​

ಕೋಲ್ಕತ: ಮುಂದಿನ ವಾರ ಅಂತಾರಾಷ್ಟ್ರೀಯ ಕ್ರಿಕೆಟ್ ನಿಷೇಧ ಶಿಕ್ಷಾವಧಿ ಪೂರ್ಣಗೊಳಿಸಲಿರುವ ಆಸ್ಟ್ರೇಲಿಯಾದ ತಾರಾ ಆಟಗಾರ ಡೇವಿಡ್ ವಾರ್ನರ್ ಐಪಿಎಲ್​ನ ಈ ಸೀಸನ್​ನ ಮೊದಲ ಪಂದ್ಯದಲ್ಲಿ ಗಳಿಸಿದ ಭರ್ಜರಿ ಅರ್ಧ ಶತಕದ ನೆರವಿನಿಂದ ಮಾಜಿ ಚಾಂಪಿಯನ್ ಸನ್​ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ ನೈಟ್​ರೈಡರ್ಸ್​ಗೆ 182 ರನ್​ ಗುರಿ ನೀಡಿದೆ.

ಟಾಸ್​ ಗೆದ್ದ ಕೋಲ್ಕತ ನೈಟ್​ರೈಡರ್ಸ್ ಬೌಲಿಂಗ್​ ಆಯ್ದುಕೊಂಡಿತು. ಸನ್​ರೈಸರ್ಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತು. ಸನ್​ರೈಸರ್ಸ್​ ಪರ ಪರ ಡೇವಿಡ್​ ವಾರ್ನರ್​ 85 ರನ್​ ಗಳಿಸಿದರೆ, ಜಾನಿ ಬೇರ್ಸ್ಟೊವ್ 39 ಮತ್ತು ವಿಜಯ್​ ಶಂಕರ್​ 40* ರನ್​ ಗಳಿಸಿದರು.