2019ನೇ ಇಂಗ್ಲೆಂಡ್​​ ವಿಶ್ವಕಪ್​ ತಂಡದ ಕೋಚ್​​ ಟ್ರೆವರ್ ಬೇಲಿಸ್ ಎಸ್​ಆರ್​​ಎಚ್​ ಮುಖ್ಯ ಕೋಚ್​ ಆಗಿ ನೇಮಕ

ಮುಂಬೈ: ಇಂಡಿಯನ್​​​ ಪ್ರೀಮಿಯರ್​ ಲೀಗ್​ (ಐಪಿಎಲ್​)ನ ಫ್ರಾಂಚೈಸಿಗಳಲ್ಲಿ ಒಂದಾದ ಸನ್​​ರೈಸರ್ಸ್​ ಹೈದರಾಬಾದ್​​ (ಎಸ್​ಆರ್​ಎಚ್​) ತಂಡದ ಮುಖ್ಯ ಕೋಚ್​​ ಆಗಿ ಇಂಗ್ಲೆಂಡ್​​ ವಿಶ್ವಕಪ್​​ ತಂಡದ ಟ್ರೆವರ್​​ ಬೇಲಿಸ್​​ ಅವರು ಗುರುವಾರ ನೇಮಕಗೊಂಡಿದ್ದಾರೆ.

12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​​ ಚಾಂಪಿಯನ್​ ಆತಿಥೇಯ ಇಂಗ್ಲೆಂಡ್​ ತಂಡ ಮುಖ್ಯ ಕೋಚ್​​ ಆಗಿ ಕಾರ್ಯ ನಿರ್ವಹಿಸಿದ್ದ ಟ್ರೆವರ್ ಬೇಲಿಸ್ 2020ನೇ ಐಪಿಎಲ್​​ ಆವೃತ್ತಿಯಲ್ಲಿ ಎಸ್​ಆರ್​​ಎಚ್​ ತಂಡದ ತರಬೇತಿದಾರರಾಗಿ ಕೆಲಸ ನಿರ್ವಹಿಸಲಿದ್ದಾರೆ.

ಟ್ರೆವರ್ ಬೇಲಿಸ್ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್​ ತಂಡ ಪ್ರಸಕ್ತ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಚೊಚ್ಚಲ ಟ್ರೋಫಿ ಜಯಸಿದೆ. ಈ ಹಿನ್ನಲೆಯಲ್ಲಿ ಎಸ್​ಆರ್​​ಎಚ್​​​​​ ಆಡಳಿತ ಮಂಡಳಿ ಬೇಲಿಸ್​​ ಅವರನ್ನು ಫ್ರಾಂಚೈಸಿಯ ಮುಖ್ಯ ಕೋಚ್​​ ಆಗಿ ನೇಮಿಸಲಾಗಿದೆ ಎಂದು ಎಸ್​​ಆರ್​ಎಚ್​​​ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಹೈದರಾಬಾದ್​​ ತಂಡದ ಕೋಚ್​​ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 2016ನೇ ಆವೃತ್ತಿಯಲ್ಲಿ ಚಾಂಪಿಯನ್​​ ಪಟ್ಟ ಅಲಂಕರಿಸಿತ್ತು. ಆದರೆ, 2018ರಲ್ಲಿ ಚೆನ್ನೈ ಸೂಪರ್​ ಕಿಂಗ್​ ವಿರುದ್ಧ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. (ಏಜೆನ್ಸೀಸ್​)