ಸನ್ನಿ ಲಿಯೋನ್​ಗೆ ಗಣೇಶ ಹಬ್ಬದಂದು ಸಿಕ್ಕ ವರ ಏನ್​ ಗೊತ್ತಾ?

ಮುಂಬೈ: ಬಾಲಿವುಡ್​ ಮೋಹಕ ಬೆಡಗಿ ಸನ್ನಿ ಲಿಯೋನ್​ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಈ ಸಾಲಿನ ಹಬ್ಬಕ್ಕೆ ಗಣೇಶ ಸನ್ನಿಗೆ ವರ ಕೊಟ್ಟಿದ್ದಾನೆ.

ಹೌದು, ಎಲ್ಲರೂ ಗಣೇಶನನ್ನು ಮನೆಗೆ ಕರೆತರುವ ಮೂಲಕ ಹಬ್ಬ ಆಚರಿಸಿದರೆ, ಸನ್ನಿ ಲಿಯೋನ್​ ಹಾಗೂ ಆಕೆಯ ಪತಿ ಡೇನಿಯಲ್​ ವೆಬರ್​ ನೂತನ ನಿವಾಸದಲ್ಲಿ ಗಣೇಶ ಹಬ್ಬ ಆಚರಿಸಿದ್ದಾರೆ. ಗಣೇಶ ಸನ್ನಿ ದಂಪತಿಗೆ ಹೊಸ ನಿವಾಸವನ್ನು ವರವಾಗಿ ನೀಡಿದ್ದು, ಈ ಬಗ್ಗೆ ಸನ್ನಿ ತನ್ನ ಪತಿಯೊಂದಿಗೆ ನೂತನ ನಿವಾಸದಲ್ಲಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಆಪ್​ಲೋಡ್​ ಮಾಡಿದ್ದಾರೆ.

ನನಗೆ ಹಬ್ಬದ ನಿಯಮಗಳು ಗೊತ್ತಿಲ್ಲ, ಆದರೆ ದೇವರು ಎಲ್ಲರಿಗೂ ಒಳ್ಳೆದನ್ನ ಮಾಡಲಿ ಎಂದು ಸನ್ನಿ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.