ಸನ್ನಿ ಡಿಯೋಲ್‌ ಕೇವಲ ರೀಲ್‌ ಫೌಜಿ, ಆದರೆ ನಾನು ರಿಯಲ್‌ ಯೋಧ: ಅಮರಿಂದರ್ ಸಿಂಗ್‌

ನವದೆಹಲಿ: ಗುರುದಾಸ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ, ರಾಜಕಾರಣಿ ಸನ್ನಿ ಡಿಯೋಲ್‌ ವಿರುದ್ಧ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಕಿಡಿಕಾರಿದ್ದು, ಅವರು ಕೇವಲ ಸಿನಿಮಾಗಳಲ್ಲಿನ ಯೋಧ ಮಾತ್ರ ಎಂದು ಮೇಜರ್‌ ಕುಲ್ದೀಪ್‌ ಸಿಂಗ್‌ ಚಂದಾಪುರಿ ಪಾತ್ರವನ್ನು 1997ರ ಬಾರ್ಡರ್‌ ಸಿನಿಮಾದಲ್ಲಿ ನಿಭಾಯಿಸಿದ್ದನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.

ಸ್ವತಃ ಸೇವೆಯಲ್ಲಿ ಸೇವೆ ಸಲ್ಲಿಸಿರುವ ಅಮರೀಂದರ್‌ ಸಿಂಗ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖರ್‌ ಅವರ ಪರ ಪ್ರಚಾರ ಕೈಗೊಂಡಿದ್ದ ಅವರು, ಡಿಯೋಲ್‌ ಅವರಿಗೆ ಈ ಕ್ಷೇತ್ರದಲ್ಲಿ ತಳಮಟ್ಟದ ಬೆಂಬಲವಿಲ್ಲ ಎಂದರು.

ಸನ್ನಿ ಡಿಯೋಲ್ ಕೇವಲ ಸಿನಿಮಾದಲ್ಲಿನ ಫೌಜಿಯಾಗಿದ್ದಾರೆ. ಆದರೆ ನಾನು ನಿಜವಾದ ಫೌಜಿ(ಯೋಧ) ಆಗಿದ್ದೇನೆ. ನಾವು ಅವರನ್ನು ಸೋಲಿಸುತ್ತೇವೆ. ಅವರಿಂದ ಸುನೀಲ್ ಜಾಕರ್ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಭಯವಿಲ್ಲ. ಸನ್ನಿ ಡಿಯೋಲ್‌ ಓರ್ವ ವೃತ್ತಿ ಜೀವನವೇ ಮುಗಿದಿರುವ ವಯಸ್ಸಾದ ನಟ. ಅವರು ಓರ್ವ ನಟನಾಗಿ ಸಿನಿಮಾದಲ್ಲಿ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿದರು.

ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಸನ್ನಿಡಿಯೋಲ್‌ ಅವರನ್ನು ಬಿಜೆಪಿ, 2017 ವರೆಗೂ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಾಲಿವುಡ್‌ ಪ್ರಖ್ಯಾತ ನಟ ವಿನೋದ್‌ ಖನ್ನಾರ ಗುರುದಾಸ್‌ಪುರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಸುನಿಲ್ ಜಾಕರ್ ಅವರನ್ನು ಗುರುದಾಸ್‌ಪುರದಿಂದ ಕಣಕ್ಕಿಳಿಸಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *