ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಎಂ.ಎಸ್. ಸುಂಕಾಪುರ ಸಾಹಿತ್ಯದಲ್ಲಿ ನವರಸಗಳ ಜೀವಂತಿಕೆ ಇದೆ. ಜಾನಪದ ರಂಗಭೂಮಿಗೆ ಅವರು ಆಧಾರ ಸ್ತಂಭವಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಡಾ. ಎಂ. ಎಸ್. ಸುಂಕಾಪುರ ದತ್ತಿ ನಿಮಿತ್ತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ಸುಂಕಾಪುರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಡಾ. ಎಂ. ಎಸ್. ಸುಂಕಾಪುರ ಕನ್ನಡ ಸಾಹಿತ್ಯ ಲೋಕದ ಹಾಸ್ಯ ಪ್ರಕಾರದ ಸಾಹಿತಿಗಳಲ್ಲೊಬ್ಬರು. ಪ್ರಾಧ್ಯಾಪಕರಾದ ಅವರು ಕಠಿಣ ವಿಷಯಗಳನ್ನು ಹಾಸ್ಯಭರಿತವಾಗಿ ಹೇಳುವ ಕಲೆ ಕರಗತ ಮಾಡಿಕೊಂಡಿದ್ದರು. ಸಮಾಜವನ್ನು ಹಾಸ್ಯದ ಮೂಲಕವೇ ತಿದ್ದುವ, ಜಾಗೃತಗೊಳಿಸುವ ಶಕ್ತಿ ಇತ್ತು ಎಂದರು.
ನಿವೃತ್ತ ಇಂಜಿನಿಯರ್ ಎಫ್.ಐ. ಚನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಜಯಶ್ರೀ ಚನ್ನಪ್ಪಗೌಡರ, ಶ್ರೀನಿವಾಸ ವಾಡಪ್ಪಿ, ಕೆ.ಎಂ. ಅಂಗಡಿ, ವಿ.ಬಿ. ಸಂತೋಜಿ, ಸಿ.ಎಂ. ಕುಂದಗೋಳ, ಪುಷ್ಪಾ ಪಾಟೀಲ, ಮಧುಮತಿ ಸಣಕಲ್, ಎಂ.ಎಸ್. ನರೇಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.
ಜಾನಪದ ರಂಗಭೂಮಿಗೆ ಆಧಾರವಾಗಿದ್ದರು ಸುಂಕಾಪುರ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…