ಭಾರತಕ್ಕೆ ಸ್ಟಿಮಕ್ ಕೋಚ್​: ಹೈಪ್ರೊಫೈಲ್ ಕೋಚ್ ನೇಮಿಸಿದ ಎಐಎಫ್​ಎಫ್

ನವದೆಹಲಿ: ಕ್ರೋವೆಷಿಯಾದ ಮಾಜಿ ಆಟಗಾರ ಇಗೊರ್ ಸ್ಟಿಮಕ್​ರನ್ನು ಭಾರತ ಫುಟ್​ಬಾಲ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಮುಂದಿನ ಎರಡು ವರ್ಷಗಳ ಕಾಲ ಅವರು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ಜನವರಿಯಲ್ಲಿ ಸ್ಟೀಫನ್ ಕಾನ್ಸ್​ಟಂಟೈನ್ ರಾಜೀನಾಮೆ ನೀಡಿದ್ದರಿಂದ ಕೋಚ್ ಹುದ್ದೆ ಖಾಲಿ ಉಳಿದಿತ್ತು. ಎಎಫ್​ಸಿ ಏಷ್ಯಾಕಪ್​ನಲ್ಲಿ ಭಾರತದ ಕಳಪೆ ನಿರ್ವಹಣೆಯಿಂದಾಗಿ ಕಾನ್ಸ್​ಟಂಟೈನ್ ರಾಜೀನಾಮೆ ನೀಡಿದ್ದರು.

ಬುಧವಾರ ನಡೆದ ಎಐಎಫ್​ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಗೊರ್ ಹೆಸರನ್ನು ಅಂತಿಮಗೊಳಿಸಲಾಯಿತು. ಜೂನ್ 5ರಿಂದ ಥಾಯ್ಲೆಂಡ್​ನಲ್ಲಿ ನಡೆಯಲಿರುವ ಕಿಂಗ್ಸ್ ಕಪ್ ಟೂರ್ನಿ ಇಗೊರ್​ಗೆ ಮೊದಲ ಸವಾಲಾಗಿದೆ. ಇಗೊರ್ 1998ರ ವಿಶ್ವಕಪ್ ಟೂರ್ನಿಯಲ್ಲಿ ಕ್ರೋವೆಷಿಯಾ ತಂಡದ ಪರ ಆಡಿದ್ದರು. ಫ್ರಾನ್ಸ್​ನಲ್ಲಿ ನಡೆದ ಟೂರ್ನಿಯಲ್ಲಿ ಕ್ರೋವೆಷಿಯಾ 3ನೇ ಸ್ಥಾನ ಪಡೆದಿತ್ತು. 18 ವರ್ಷ ಕೋಚಿಂಗ್ ಅನುಭವ ಹೊಂದಿರುವ ಇಗೊರ್ ಮಾರ್ಗದರ್ಶನದಲ್ಲಿ ಕ್ರೋವೆಷಿಯಾ ತಂಡ 2014ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.

1996ರಲ್ಲಿ ಯುಇಎಫ್​ಎ ಯುರೋಪಿಯನ್ ಚಾಂಪಿಯನ್​ಷಿಪ್​ನಲ್ಲಿ 8ರ ಘಟ್ಟಕ್ಕೇರಿದ ಕ್ರೋವೆಷಿಯಾ ತಂಡದಲ್ಲಿದ್ದರು. ಜತೆಗೆ 1987ರಲ್ಲಿ 20 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿ ಜಯಿಸಿದ ಯುಗೊಸ್ಲಾವಿಯಾ ತಂಡದ ಸದಸ್ಯರಾಗಿದ್ದರು.

ಸಾಕಷ್ಟು ಅನುಭವವಿರುವ ಕೋಚ್ ಇವರು. ಅವರೊಂ ದಿಗೆ ಕೆಲಸ ಮಾಡಲು ಉತ್ಸುಕ ನಾಗಿದ್ದೇನೆ. ಈಗಾಗಲೇ ಹೆಚ್ಚಿನ ಪ್ರತಿಭೆಗಳು ರಾಷ್ಟ್ರೀಯ ತಂಡಕ್ಕೆ ಬರುತ್ತಿದ್ದಾರೆ. ಈ ಹಂತದಲ್ಲಿ ಸ್ಟಿಮಕ್ ಕೋಚ್ ಆಗಿರುವುದು ಅಪಾರ ನೆರವಿಗೆ ಬರಲಿದೆ.

| ಸುನೀಲ್ ಛೇಟ್ರಿ ಭಾರತ ತಂಡದ ನಾಯಕ

Leave a Reply

Your email address will not be published. Required fields are marked *