ರಾಮದುರ್ಗ: ಪಟ್ಟಣದ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮೆದಾನದಲ್ಲಿ ಡಿ.8ರಂದು 9.30ಕ್ಕೆ ಪರಪ್ಪ ಮುತ್ಯಾರ 2ನೇ ತಾಲೂಕುಮಟ್ಟದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಕೆಎಲ್ಇ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಕುಡಚಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ರಾಮದುರ್ಗ ಡಾ.ರಾಜೇಂದ್ರ ಮುತ್ಯಾ ಪುಣ್ಯಾಶ್ರಮ ಸೇವಾ ಟ್ರಸ್ಟ್ , ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿಯ ವೆದ್ಯಕಿಯ ಸಂಶೋಧನಾಲಯ, ಜೆಎನ್ಎಂಸಿ, ತಾಲೂಕು ಆಸ್ಪತ್ರೆ, ಐಎಂಎ, ಎಎ್ಐ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಪುನೀತ ೌಂಡೇಷನ್, ಜನಸಾಮಾನ್ಯರ ಹಿತರಣಾ ಸಮಿತಿ ಹಾಗೂ ವಿವಿಧ ಸಂಟನೆಗಳ ಆಶ್ರಯದಲ್ಲಿ ಶಿಬಿರ ನೆರವೇರಲಿದೆ. ಹದ್ರೋಗ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಚಿಕ್ಕಮಕ್ಕಳ, ಶಸ್ತ್ರ ಚಿಕಿತ್ಸಕರು, ಕಿವಿ, ಮೂಗು, ಗಂಟಲು, ನೇತ್ರ, ಮೂತ್ರಪಿಂಡ, ಚರ್ಮರೋಗ ಸೇರಿ ವಿವಿಧ ವಿಭಾಗದ ತ ವೆದ್ಯರು ಇರಲಿದ್ದು. ಜನರು ಶಿಬಿರದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಉದ್ಘಾಟನೆ ಸಮಾರಂಭಕ್ಕೆ ಡಾ.ರಾಜೇಂದ್ರ ಶಿವಯೋಗಿ ಮುತ್ಯಾ ಸಾನ್ನಿಧ್ಯದಲ್ಲಿ ಬೆಳಗಾವಿ ವೆದ್ಯ ಡಾ. ಮಲ್ಲಿಕಾರ್ಜುನ ಖಾನಪೇಟ ಉದ್ಘಾಟಿಸುವರು. ಮಧ್ಯಾಹ್ನ 4 ಗಂಟೆಗೆ ವೆದ್ಯರಿಗೆ ವೆದ್ಯಾಮತ ಸನ್ಮಾನ ಸಮಾರಂಭವಿದೆ. ಡಾ.ರಾಜೇಂದ್ರ ಶಿವಯೋಗಿ ಮುತ್ಯಾ ಸಾನ್ನಿಧ್ಯ ವಹಿಸುವರು. ಪ್ರಭುಸ್ವಾಮಿ ಸರಗಣಾಚಾರಿ ಅಧ್ಯತೆ ವಹಿಸಲಿದ್ದು, ಶಾಸಕ ಅಶೋಕ ಪಟ್ಟಣ, ಟಿಎಚ್ಒ ಡಾ.ನವೀನ ನಿಜಗುಲಿ, ಡಾ.ದೇವರಾಜ ಪಾಟೀಲ, ಡಾ.ಪ್ರಕಾಶ ರಾಮನಗೌಡರ, ಡಾ.ಶಿವಲೀಲಾ ಕಂಬಿ, ಮಲ್ಲಣ್ಣ ಯಾದವಾಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಡಾ.ರಾಜೇಂದ್ರ ಶಿವಯೋಗಿ ಮುತ್ಯಾ, ತಾಲೂಕು ವೆದ್ಯಾಧಿಕಾರಿ ಡಾ. ನವೀನ ನಿಜಗುಲಿ, ಡಾ. ಮತ್ಯುಂಜಯ ಅಣ್ಣಾನವರ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ ಅಧ್ಯ ಡಾ.ಬಿ.ಎಲ್. ಸಂಕನಗೌಡರ, ಪುನೀತ ೌಂಡೇಷನ್ ಅಧ್ಯ ರಾಜು ಹರ್ಲಾಪುರ, ಶಾಮಣ್ಣ ಧಡಿಗೌಡ್ರ, ಜನಸಾಮಾನ್ಯರ ಹಿತರಣಾ ಸಮಿತಿ ಅಧ್ಯ ಈರಣ್ಣ ಕಲ್ಯಾಣಿ ಇತರರಿದ್ದರು.