More

  ವಿಶ್ವ ರ‍್ಯಾಂಕಿಂಗ್​ನಲ್ಲಿ ಅಗ್ರ 100ರೊಳಗೆ ಸುಮಿತ್​ ನಗಾಲ್​ ಲಗ್ಗೆ; ಭಾರತದ 10ನೇ ಸಾಧಕ…


  ಚೆನ್ನೈ: ಸುಮಿತ್​ ನಗಾಲ್​ ಚೆನ್ನೈ ಓಪನ್​ ಎಟಿಪಿ ಚಾಲೆಂಜರ್​ ಟೆನಿಸ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟವೇರಿದ್ದಾರೆ. ಈ ಮೂಲಕ ವೃತ್ತೀಜಿವನದಲ್ಲಿ ಅವರು ಮೊದಲ ಬಾರಿಗೆ ಎಟಿಪಿ ಸಿಂಗಲ್ಸ್​ ರ‍್ಯಾಂಕಿಂಗ್​ನಲ್ಲಿ ಅಗ್ರ 100ರೊಳಗೆ ಪ್ರವೇಶ ಪಡೆದಿದ್ದಾರೆ. 26 ವರ್ಷದ ನಗಾಲ್​, ಪ್ರಜ್ಞೇಶ್​ ಗುಣೇಶ್ವರನ್​ (2019) ಬಳಿಕ ಈ ಸಾಧನೆ ಮಾಡಿದ ಮೊದಲ ಮತ್ತು ಒಟ್ಟಾರೆ 10ನೇ ಭಾರತೀಯರೆನಿಸಿದ್ದಾರೆ.

  ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ನಗಾಲ್​ ಇಟಲಿಯ ಲುಕಾ ನಾರ್ಡಿ ವಿರುದ್ಧ 6-1, 6-4 ನೇರಸೆಟ್​ಗಳಿಂದ ಗೆಲುವು ಸಾಧಿಸಿದರು. ಇದು ಅವರಿಗೆ ವೃತ್ತೀಜಿವನದ 5ನೇ ಎಟಿಪಿ ಚಾಲೆಂಜರ್​ ಪ್ರಶಸ್ತಿ ಗೆಲುವಾಗಿದೆ. ಸೋಮವಾರ ಪ್ರಕಟಗೊಳ್ಳಲಿರುವ ಪರಿಷತ ಎಟಿಪಿ ರ‍್ಯಾಂಕಿಂಗ್​ನಲ್ಲಿ ನಗಾಲ್​ 98ನೇ ಸ್ಥಾನ ಅಲಂಕರಿಸಲಿದ್ದಾರೆ. ಟೂರ್ನಿಗೆ ಮುನ್ನ ಅವರು 121ನೇ ರ‍್ಯಾಂಕ್​ನಲ್ಲಿದ್ದರು.

  ಕಳೆದ ವರ್ಷವಷ್ಟೇ ಪ್ರಾಯೋಜಕರ ಕೊರತೆಯಿಂದಾಗಿ ತನ್ನ ಬ್ಯಾಂಕ್​ ಖಾತೆಯಲ್ಲಿ 80 ಸಾವಿರ ರೂ. ಮಾತ್ರ ಉಳಿದಿದೆ ಎಂದು ಅಳಲು ತೋಡಿಕೊಂಡಿದ್ದ ನಗಾಲ್​, ಹಾಲಿ ವರ್ಷಾರಂಭದಲ್ಲಿ ಆಸ್ಟ್ರೆಲಿಯನ್​ ಓಪನ್​ ಮೊದಲ ಸುತ್ತಿನಲ್ಲಿ ಶ್ರೇಯಾಂಕಿತ ಆಟಗಾರನಿಗೆ ಸೋಲುಣಿಸಿ ಗಮನಸೆಳೆದಿದ್ದರು. ನಂತರ 2ನೇ ಸುತ್ತಿನಲ್ಲಿ ಹೊರಬಿದ್ದಿದ್ದರೂ, ಸುಮಾರು 1 ಕೋಟಿ ರೂ. ಬಹುಮಾನ ಮೊತ್ತ ಒಲಿಸಿಕೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts