More

  ಎಟಿಪಿ ರ‍್ಯಾಂಕಿಂಗ್​ನಲ್ಲಿ 77ನೇ ಸ್ಥಾನಕ್ಕೇರಿದ ಸುಮಿತ್​ ನಗಾಲ್​; ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಬಹುತೇಕ ಖಚಿತ

  ನವದೆಹಲಿ: ಜರ್ಮನಿಯ ಹೀಲ್​ಬ್ರಾನ್​ ಎಟಿಪಿ ಚಾಲೆಂಜರ್​ ಟೆನಿಸ್​ ಟೂರ್ನಿಯಲ್ಲಿ ಭಾನುವಾರವಷ್ಟೇ ಪ್ರಶಸ್ತಿ ಗೆದ್ದ ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಎಟಿಪಿ ರ‍್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 77ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ನಗಾಲ್​ ಸ್ಪರ್ಧೆ ಬಹುತೇಕ ಖಚಿತವೆನಿಸಿದೆ.

  ಸ್ವಿರ್ಜಲೆಂಡ್​ನ ಅಲೆಕ್ಸಾಂಡರ್​ ರಿಚಾರ್ಡ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ನಗಾಲ್​ 6-1, 6-7, 6-3 ಸೆಟ್​ಗಳಿಂದ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ 713 ಎಟಿಪಿ ಅಂಕಗಳನ್ನು ಕಲೆಹಾಕಿದರು. ಇದರೊಂದಿಗೆ ನಗಾಲ್​ ಎಟಿಪಿ ರ್ಯಾಂಕಿಂಗ್​ನಲ್ಲಿ ಬರೋಬ್ಬರಿ 18 ಸ್ಥಾನ ಪ್ರಗತಿ ಕಂಡಿದ್ದಾರೆ.

  ಪ್ಯಾರಿಸ್​ ಒಲಿಂಪಿಕ್ಸ್​ ಸಿಂಗಲ್ಸ್​ ವಿಭಾಗದಲ್ಲಿ ವಿಶ್ವದ ಅಗ್ರ 56 ಆಟಗಾರರಿಗೆ ನೇರಅರ್ಹತೆ ಲಭಿಸಲಿದೆ. ಆದರೆ ಒಂದು ದೇಶದಿಂದ ಗರಿಷ್ಠ 4 ಆಟಗಾರರು ಮಾತ್ರ ಆಡಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ವಿಶ್ವ ರ್ಯಾಂಕಿಂಗ್​ನಲ್ಲಿ 56ನೇ ಸ್ಥಾನದ ನಂತರದಲ್ಲಿರುವ ಇತರ ಆಟಗಾರರಿಗೂ ಅವಕಾಶ ಲಭಿಸುವ ನಿರೀೆ ಇರುತ್ತದೆ. ಆಯಾ ದೇಶಗಳಿಂದ ಒಲಿಂಪಿಕ್ಸ್​ಗೆ ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಅಂತಾರಾಷ್ಟ್ರೀಯ ಟೆನಿಸ್​ ಒಕ್ಕೂಟ (ಐಟಿಎ್​) ಬುಧವಾರ ಪ್ರಕಟಿಸಲಿದೆ. ಬಳಿಕ ಜೂನ್​ 19ರಂದು ಆಯಾ ರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಗಳು ಒಲಿಂಪಿಕ್ಸ್​ನಲ್ಲಿ ಆಡಲಿರುವ ಆಟಗಾರರ ಹೆಸರನ್ನು ಅಂತಿಮಗೊಳಿಸಲಿವೆ.

  ರ್ಯಾಂಕಿಂಗ್​ ಆಧಾರದಲ್ಲಿ ಒಲಿಂಪಿಕ್ಸ್​ ಅರ್ಹತೆಗೆ ಸೋಮವಾರ ಅಂತಿಮ ಗಡುವು ಆಗಿದ್ದು, 26 ವರ್ಷದ ನಗಾಲ್​ ಈ ಕೊನೇ ಅವಕಾಶದಲ್ಲಿ ಭಾರಿ ಜಿಗಿತ ಕಂಡಿರುವುದು ಲಾಭದಾಯಕವೆನಿಸಿದೆ. 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಕೊನೆಯದಾಗಿ ಸೋಮ್​ದೇವ್​ ದೇವವರ್ಮನ್​ ಸಿಂಗಲ್ಸ್​ ವಿಭಾಗದಲ್ಲಿ ಆಡಿದ ಭಾರತೀಯರಾಗಿದ್ದಾರೆ.

  ಭಾರತದ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸೂಪರ್​ 8 ಹಂತ ತಲುಪಲು ಭಾರತದ ಸಹಾಯವೇ ಬೇಕಿದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts