ಅಂಬರೀಷ್ ಹುಟ್ಟುಹಬ್ಬಕ್ಕೆ ಮನಮಿಡಿಯುವ ಸಾಲುಗಳೊಂದಿಗೆ ಮಿಸ್​ ಯೂ, ಹ್ಯಾಪಿ ಬರ್ತ್​ ಡೇ ಮೈ ಲವ್​ ಎಂದ ಸುಮಲತಾ

ಬೆಂಗಳೂರು: ಇಂದು ದಿವಂಗತ ನಟ ಅಂಬರೀಷ್​ ಜನ್ಮದಿನ. ಮಂಡ್ಯದಲ್ಲಿ ಅಂಬಿ ಜಯಂತ್ಯುತ್ಸವದೊಂದಿಗೆ ಸುಮಲತಾ ಅಂಬರೀಷ್​ ಅವರು ಚುನಾವಣೆಯಲ್ಲಿ ಗೆದ್ದ ವಿಜಯೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ತಮ್ಮ ಪತಿಯ ನೆನಪಲ್ಲಿ ಸುಮಲತಾ ಭಾವನಾತ್ಮಕವಾಗಿ ಫೇಸ್​ಬುಕ್​ ಪೋಸ್ಟ್ ಹಾಕಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ನಿಮ್ಮ ಜನ್ಮದಿನದಂದು ನೀವಿಲ್ಲ. ನೀವು ನಮ್ಮ ಜತೆಗೆ ಇಲ್ಲಿ ಇರದೆ ಇರಬಹುದು. ಆದರೆ, ನನ್ನ ಹಾಗೂ ಅಭಿಷೇಕ್​ ಹೃದಯಲ್ಲಿ ಸದಾ ನೆಲೆಸಿದ್ದೀರಿ. ನಮ್ಮ ಆಶೀರ್ವದಿಸುತ್ತ, ರಕ್ಷಿಸುತ್ತ, ನಮಗೆ ಮಾರ್ಗದರ್ಶನ ಮಾಡುತ್ತ ಇದ್ದೀರಿ.

ನೀವು ಅದೆಷ್ಟೋ ಜೀವಿತಾವಧಿಗಳಿಗೆ ಸಾಕಾಗುವಷ್ಟು ಪ್ರೀತಿ ಗಳಿಸಿಕೊಂಡಿದ್ದೀರಿ. ನೀವು ಅಲ್ಲಿಂದಲೇ ನಮ್ಮನ್ನು ನೋಡುತ್ತಿದ್ದೀರಿ ಎಂಬ ಖಾತ್ರಿಯಿದೆ. ಅದೇ ನಗುವಿನೊಂದಿಗೆ, ಅದೇ ತುಂಟ ಕಣ್ಣುಗಳಲ್ಲಿ ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ಪ್ರೀತಿಯಿದೆ. ನಿಮ್ಮ ಆತ್ಮ ಈಗ ಹೆಮ್ಮೆ ಪಡುತ್ತಿದೆ ಎಂಬುದು ನನಗೆ ಗೊತ್ತು. ಪ್ರತಿ ಕ್ಷಣ ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮನ್ನು ಪ್ರೀತಿಸುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್​ ಎಂದು ಮನಮಿಡಿಯುವ ಪೋಸ್ಟ್​ ಹಾಕಿಕೊಂಡಿದ್ದಾರೆ.

Leave a Reply

Your email address will not be published. Required fields are marked *