ಯಾರ‍್ಯಾರಿಗೆ ಅಭಿನಂದನೆ ಹೇಳಲಿ? ಫೇಸ್​​ಬುಕ್​ನಲ್ಲಿ ಜಯದ ಸಂತೋಷದ ಪೋಸ್ಟ್​ !

ಮಂಡ್ಯ: ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದಾಗಿನಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸದ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆಯಲ್ಲಿದ್ದಾರೆ.

ಸುಮಲತಾ 5,07,555 ಹಾಗೂ ನಿಖಿಲ್​ 4,36,808ಮತ ಗಳಿಸಿದ್ದು ಒಟ್ಟು 70, 747ಮತಗಳ ಅಂತರದಿಂದ ಸುಮಲತಾ ಮುನ್ನಡೆ ಸಾಧಿಸಿದ್ದಾಗಿ ಚುನಾವಣಾ ಆಯೋಗ ಸದ್ಯದ ವರದಿ ಕೊಟ್ಟಿದೆ. ಗೆಲುವು ಇನ್ನೂ ಅಧಿಕೃತ ಘೋಷಣೆಯಾಗಿಲ್ಲ

ಈಗಾಗಲೇ ಸುಮಲತಾ ಅಂಬರೀಷ್​ ಫೇಸ್​ಬುಕ್​ನಲ್ಲಿ ತಮ್ಮ ಗೆಲುವಿನ ಸಂತೋಷ ಹಂಚಿಕೊಂಡಿದ್ದಾರೆ. ಯಾರ‍್ಯಾರಿಗೆ ಅಭಿನಂದನೆ ಹೇಳಲಿ? ನನ್ನ ಗೆಲುವಿಗಾಗಿ ಮಂಡ್ಯದ ಜನತೆ ಮಾತ್ರವಲ್ಲದೆ ಇಡೀ ರಾಜ್ಯದ ಜನರೇ ಹಾರೈಸಿದ್ದಾರೆ ಎಂದು ಪೋಸ್ಟ್​ ಹಾಕಿದ್ದಾರೆ.

ಅದರ ಜತೆಗೆ, ಮಂಡ್ಯದ ಜನತೆ ಪ್ರಜಾಪ್ರಭುತ್ವ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ, ತೋಳ್ಬಲ ಎಲ್ಲವನ್ನೂ ಮೀರಿ, ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವ ಗೆಲ್ಲಿಸಿದ್ದಾರೆ. ಮಂಡ್ಯದ ಜನರಿಗೆ ಕೋಟಿ ಕೋಟಿ ಅಭಿನಂದನೆಗಳು ಎಂದು ಇನ್ನೊಂದು ಪೋಸ್ಟ್​ ಹಾಕಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *