ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕೋಣ, ದ್ವೇಷ-ವೈಷಮ್ಯ ಬಿಟ್ಟು ಬಿಡಿ ಎಂದು ಸುಮಲತಾ ಮನವಿ

ಮಂಡ್ಯ: ನನ್ನ ಎಲ್ಲಾ ಪ್ರೀತಿಯ ಮಂಡ್ಯ ಬಂಧುಗಳೇ …ಚುನಾವಣೆ ಮುಗಿದಿದೆ. ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಳು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ. ಆದರೆ, ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಿರುವವರು ಚುನಾವಣೆಯ ದ್ವೇಷಗಳನ್ನು ವೈಷಮ್ಯಗಳನ್ನು ಚುನಾವಣೆಗೆ ಬಿಟ್ಟುಬಿಡಬೇಕು…

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸುಮಲತಾ ಅಂಬರೀಷ್ ಅವರು ಮಂಡ್ಯ ಜನತೆಗೆ ತಮ್ಮಫೇಸ್​​ಬುಕ್​​ ಖಾತೆಯಲ್ಲಿ ಚುನಾವಣೆ ಮುಗೀತು, ದ್ವೇಷ-ವೈಷಮ್ಯ ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆ ಮುಗಿದು ಫಲಿತಾಂಶ ಬಂದ ನಂತರವೂ ದ್ವೇಷವನ್ನು ಮುಂದುವರಿಸಬಾರದು. ಒಂದೇ ಕುಟುಂಬದಂತೆ ನಾವೆಲ್ಲರೂ ಬದುಕಬೇಕಾಗಿದೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಇವೆಲ್ಲವೂ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆಯ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಬೇಕು ಹಾಗೂ ಚಿಂತಿಸಬೇಕು. ಮಂಡ್ಯದ ಜನತೆಯಾದ ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕೋಣ ರಾಜಕೀಯ ಕಿತ್ತಾಟಗಳನ್ನು ದಯವಿಟ್ಟು ಯಾರೂ ಮಾಡಬೇಡಿ .ಇದು ನನ್ನ ಜನತೆಯಲ್ಲಿ ನನ್ನ ಪ್ರೀತಿಯ ಮನವಿ ಎಂದು ತಿಳಿಸಿದ್ದಾರೆ.

ಸುಮಲತಾ ಅವರು ಮೈತ್ರಿ ಅಭ್ಯರ್ಥಿ, ಜೆಡಿಎಸ್​ನ ನಿಖಿಲ್​​ ಕುಮಾರಸ್ವಾಮಿ ಎದುರು ಎದುರು 1,23,051 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *