ನನ್ನ ಗೆಲುವು ‘ಲಗಾನ್’ ಚಿತ್ರದಂತಿತ್ತು ಎಂದು ಬಣ್ಣಿಸಿ​ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್​​​

ಮಂಡ್ಯ: ಪ್ರಚಂಡ ಗೆಲುವು ತಂದುಕೊಟ್ಟ ಮಂಡ್ಯ ಮತದಾರರಿಗೆ ಧನ್ಯವಾದ ಹೇಳಲು ಪದಗಳೇ ಸಿಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​​​​​​​​​​​.

ದೇಶದಲ್ಲಿ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರು ನಿಖಿಲ್​​​ ಕುಮಾರಸ್ವಾಮಿ ಎದುರು 1,25,876 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ವಿಜಯ ಮಾಲೆ ಧರಿಸಿದ್ದಾರೆ.

ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಇದು ನನ್ನ ಗೆಲುವಲ್ಲ. ಮಂಡ್ಯದ ಸ್ವಾಭಿಮಾನದ ಗೆಲುವಾಗಿದೆ. ಮತ ಹಾಕಿ ನನ್ನನ್ನು ಜಯಶಾಲಿಯನ್ನಾಗಿ ಮಾಡಿರುವ ಮಂಡ್ಯ ಜನತೆಗೆ ಧನ್ಯವಾದ ಹೇಳಲು ಪದಗಳೇ ಸಿಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್​​ ಹಾಗೂ ಯಶ್​​​ ಬಗ್ಗೆ ಮಾತನಾಡಿದ ಅವರು ಚುನಾವಣೆ ಪ್ರಚಾರ ವೇಳೆ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಮನೆ ಮಕ್ಕಳಂತೆ ನನ್ನ ಪರ ಹೋರಾಟ ನಡೆಸಿ, ಬೆನ್ನುಲುಬಾಗಿ ನಿಂತಿದ್ದರು. ಅಂಬರೀಶ್,​ ದರ್ಶನ್​, ಯಶ್, ಅಭಿಮಾನಿಗಳು, ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಕಾರ್ಯಕರ್ತರು ಹಾಗೂ ಮಹಿಳೆಯರು ನನಗೆ ಬೆಂಬಲ ನೀಡುವ ಮೂಲಕ ನನ್ನ ಗೆಲುವಿಗೆ ಪ್ರಮುಖ ರೂವಾರಿಗಳಾಗಿದ್ದಾರೆ. ಅವರಿಗೆಲ್ಲಾ ನನ್ನ ಹೃತ್ಫೂರ್ವಕ ಧನ್ಯವಾದಗಳು ಎಂದು ಹೇಳಿದರು.

ಸುಮಲತಾ ತಮ್ಮ ಗೆಲುವಿನ ಬಗ್ಗೆ ಅಮೀರ್​​ ಖಾನ್​​ ನಟನೆಯ ಲಗಾನ್​​​​​​​​​ ಚಿತ್ರಕ್ಕೆ ಹೋಲಿಸಿಕೊಂಡಿದ್ದಾರೆ. ನಮ್ಮದು ಒಂಥರಾ ಲಗಾನ್​​​​​​​​​​​​ ಕ್ರಿಕೆಟ್​​ ತಂಡ ಇದ್ದ ಹಾಗೇ ಇತ್ತು. ಕೊನೆಯಲ್ಲಿ ಸಿಕ್ಸರ್​​ ಬಾರಿಸಿ ಗೆಲುವು ಸಾಧಿಸಿದ್ದೇವೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ನನ್ನ ಗೆಲುವು ‘ಲಗಾನ್’ ಚಿತ್ರದಂತಿತ್ತು ಎಂದು ಬಣ್ಣಿಸಿ​ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್​​​”

  1. Jai, Sumakka
    Please serve good to mandya people , you are nice lady, all are love and expecting good things to society
    Good luck

Leave a Reply

Your email address will not be published. Required fields are marked *