ನನ್ನ ಪ್ರೀತಿ ನಮ್ಮನ್ನು ಕಾಪಾಡುತ್ತದೆ: ಪತಿ ಅಂಬರೀಷ್​ ನೆನಪಲ್ಲಿ ಭಾವುಕ ಟ್ವೀಟ್​ ಮಾಡಿದ ನಟಿ ಸುಮಲತಾ

ಬೆಂಗಳೂರು: ‘ಪ್ರೀತಿ ಜೀವನದ ಕೊನೇವರೆಗೂ ಜತೆಯಾಗಿರುತ್ತದೆ. ಅದರ ಅಗತ್ಯವೂ ಇದೆ’ ಪ್ರೇಮಿಗಳ ದಿನಾಚರಣೆಯಂದು ನಟಿ ಸುಮಲತಾ ಅಂಬರೀಷ್​ ಹೀಗೆಂದು ಟ್ವೀಟ್​ ಮಾಡಿದ್ದಾರೆ.

ಪತಿ ಅಂಬರೀಷ್​ ಅವರನ್ನು ನೆನಪಿಸಿಕೊಂಡಿರುವ ಅವರು, ನನ್ನ ಪ್ರೀತಿ ಅಲ್ಲಿಂದಲೇ ಪ್ರತಿಯೊಂದನ್ನೂ ನೋಡುತ್ತಿದೆ. ನನ್ನನ್ನು ಮತ್ತು ಮಗ ಅಭಿಯನ್ನು ಜೀವನ ಪರ್ಯಂತ ಕಾಪಾಡುತ್ತದೆ ಎಂದು ಬರೆದುಕೊಂಡು ಅಂಬರೀಷ್​ ತಮಗೆ ಕೆಂಪು ಗುಲಾಬಿ ಹೂವು ಕೊಡುತ್ತಿರುವ ವಿವಿಧ ಭಂಗಿಗಳ ಫೋಟೋಗಳನ್ನು ಕೊಲಾಜ್​ ಮಾಡಿ ಶೇರ್​ ಮಾಡಿಕೊಂಡಿದ್ದಾರೆ.

ಹಾಗೇ ನಮ್ಮ ಮಗ ಅಭಿಯ ಅಮರ್ ಟೀಸರ್​ ​ಬಿಡುಗಡೆಯಾಗಿದ್ದು ಆತನಿಗೆ ಆಶೀರ್ವಾದ ನೀಡಿ. ಪ್ರೀತಿಯೇ ಸರ್ವಸ್ವ ಎಂದುಕೊಂಡ ಪ್ರತಿಯೊಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಎಂದು ಹಾರೈಸಿದ್ದಾರೆ.