ಸುಮಲತಾ ಅಂಬರೀಷ್​ ಅವರು ದೇವಸ್ಥಾನಕ್ಕೆ ಬಂದು ಸತ್ಯವೋ ಅಸತ್ಯವೋ ಎಂದು ಪ್ರಮಾಣ ಮಾಡಲಿ

ಮಂಡ್ಯ: ಚುನಾವಣೆ ಪ್ರಚಾರ ಕೊನೆ ಹಂತಕ್ಕೆ ಬಂದಿದೆ. ಈ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನತೆ ಯಾವುದೇ ಪ್ರತಿರೋಧಕ್ಕೂ ಕುಗ್ಗಿಲ್ಲ. ನಮ್ಮ ಗೆಲುವು ಮಂಡ್ಯ ಜನತೆಯ ಗೆಲುವಾಗಿದೆ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ಹದಿನಾಲ್ಕು ಲೋಕಸಭಾ ಕ್ಷೇತ್ರದ ಜನಕ್ಕೆ ಸಂದೇಶ ಕೊಡಲು ಸುದ್ದಿಗೋಷ್ಠಿ ಕರೆದಿದ್ದೆ. ಪ್ರಚಾರದಿಂದ ಸಮಯದ ಅಭಾವ ಉಂಟಾಗಿ ಸುದ್ದಿಗೋಷ್ಠಿ ನಡೆಸಲು ಸಾಧ್ಯವಾಗಲಿಲ್ಲ ಎಂದರು.

ಸುಮಲತಾ ಅವರ ವಾಗ್ದಾಳಿಗಳು ಅತ್ಯಂತ ಕೀಳು ಮಟ್ಟದ ಅಭಿರುಚಿ ಹೊಂದಿರುವ ಹೇಳಿಕೆಯಾಗಿದ್ದು ಅದಕ್ಕೆ ಜನರೇ ಉತ್ತರ ಕೊಡಲಿದ್ದಾರೆ ಎಂದರು. ಜನರ ಮುಂದೆ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ನನ್ನ ಅಂಬರೀಶ್ ಸಂಬಂಧ ಸುಮಲತಾಗೆ ಏನು ಗೊತ್ತು? ಎಂದಿರುವ ಅವರು, ಅಂಬಿ ಅವರಿಗೆ ನನ್ನ ಜತೆ ಉತ್ತಮ ಸಂಬಂಧ ಇತ್ತು ಎಂದಿದ್ದಾರೆ.

ಅಂಬರೀಷ್ ಪಾರ್ಥಿವ ಶರೀರ ಮಂಡ್ಯಕ್ಕೆ ತಂದ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರೋದು ಬೇಡ ಎಂದು ಹೇಳಿದ್ದರು. ಇದು ಸತ್ಯವೋ ಅಸತ್ಯವೋ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ಅವರಿಗೆ ಒಂದು ಚೂರು ಸೌಜನ್ಯವಿಲ್ಲ ಎಂದು ಕಿಡಿಕಾರಿದ್ದಾರೆ.(ದಿಗ್ವಿಜಯ ನ್ಯೂಸ್​)