ಸುಮಲತಾ ಅಂಬರೀಷ್​ ಫೇಸ್​ಬುಕ್​ ಅಕೌಂಟ್​ ಬ್ಲಾಕ್​: ಹೊಸ ಖಾತೆ ತೆರೆದ ಸುಮಲತಾ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಅವರ ಫೇಸ್​ಬುಕ್​ ಖಾತೆಯನ್ನು ಬ್ಲಾಕ್​ ಮಾಡಲಾಗಿದ್ದು, ಸುಮಲತಾ ಅವರು ಹೊಸ ಖಾತೆ ತೆರೆದು ಪ್ರಚಾರ ಮುಂದುವರಿಸಿದ್ದಾರೆ.

ಸುಮಲತಾ ಅಂಬರೀಷ್​ ಹೆಸರಿನಲ್ಲಿದ್ದ ಫೇಸ್​ಬುಕ್​ ಖಾತೆಯನ್ನು ಬ್ಲಾಕ್​ ಮಾಡಲಾಗಿದೆ. ಕುತಂತ್ರದ ಭಾಗವಾಗಿ ನನ್ನ ಅಧಿಕೃತ ಖಾತೆಯನ್ನು ಕೆಲವರು ಬ್ಲಾಕ್​ ಮಾಡಿದ್ದಾರೆ. ಹಾಗಾಗಿ ಹೊಸ ಖಾತೆ ತೆರೆದು ಪ್ರಚಾರ ಆರಂಭಿಸಿದ್ದೇನೆ. ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗುವಂತೆ ಮತ್ತು ಹೊಸ ಅಕೌಂಟ್​ ಅನ್ನು ಪ್ರಮೋಷನ್​ ಮಾಡುವಂತೆ ಸುಮಲತಾ ಅಂಬರೀಷ್​ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ರಜನಿಕಾಂತ್​ ಬರುತ್ತಿಲ್ಲ

ಮಂಗಳವಾರ ನಾನು, ದರ್ಶನ್​ ಮತ್ತು ಯಶ್​ ಮಂಡ್ಯದಲ್ಲಿ ಸ್ವಾಭಿಮಾನಿಗಳ ಸಮ್ಮಿಲನ ಎಂಬ ಸಭೆಯನ್ನು ಆಯೋಜಿಸಿದ್ದೇವೆ. ಕಾರ್ಯಕ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​ ಮಂಡ್ಯಕ್ಕೆ ಬಂದು ನನ್ನ ಪರ ಪ್ರಚಾರ ಮಾಡುತ್ತಾರೆ ಎಂಬುದು ಗಾಳಿ ಸುದ್ದಿ. ರಜನಿಕಾಂತ್​ ಅವರು ಮಂಡ್ಯಕ್ಕೆ ಬರುತ್ತಿಲ್ಲ ಎಂದು ಕೆ.ಆರ್ ನಗರ ತಾಲೂಕಿನ ಮಂಚನಹಳ್ಳಿಯಲ್ಲಿ ಪ್ರಚಾರದ ವೇಳೆ ಸುಮಲತಾ ಅಂಬರೀಷ್​ ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನಿಖಿಲ್​ ಪ್ರಚಾರ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಜೆಡಿಎಸ್​ನವರು ಈ ಹಿಂದೆ ನಾಯ್ಡು, ರೆಡ್ಡಿ ಸಮಾಜದ ಬಗ್ಗೆ ಹೀನಾಯವಾಗಿ ಮಾತನಾಡಿದ್ದರು. ಆದರೆ, ಇಂದು ಚಂದ್ರಬಾಬು ನಾಯ್ಡು ಅವರನ್ನು ತಮ್ಮ ಪರ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಲೇವಡಿ ಮಾಡಿದರು.

ಕುತಂತ್ರದ ಭಾಗವಾಗಿ ನಾನು ಇದುವರೆಗೆ ಜನರೊಂದಿಗೆ ಸಂಪರ್ಕದಲ್ಲಿದ್ದ ಫೇಸ್ ಬುಕ್ ಪೇಜನ್ನು ಬ್ಲಾಕ್ ಮಾಡಿಸಿದ್ದಾರೆ ..ಇದು ನನ್ನ ಅಧಿಕೃತವಾದ ಪೇಜ್ ಆರಂಭಿಸಿದ್ದೇನೆ ಇದನ್ನು ಪ್ರಮೋಷನ್ ಮಾಡೋದು ಜನರಿಗೆ ತಲುಪಿಸೋದು ನಿಮ್ಮೆಲ್ಲರ ಜವಾಬ್ದಾರಿ …ಇದು ನನ್ನ ಪ್ರೀತಿಯ ಮನವಿ

Sumalatha Ambareesh ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಏಪ್ರಿಲ್ 15, 2019