ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ: ಸುಮಲತಾ ಅಂಬರೀಷ್​

ಮಂಡ್ಯ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಇಳಿದ ನಟಿ ಸುಮಲತಾ ಅವರು ತಮಗೆ ಸಿಕ್ಕಂತಹ ಜನರ ಬೆಂಬಲವನ್ನು ಬಣ್ಣಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಸಮಾವೇಶ ಮುಗಿದ ನಂತರ ತಮ್ಮ ಅಧಿಕೃತ ಫೇಸ್​ಬುಕ್​ ಖಾತೆಗೆ ತೆರಳಿ ಸಮಾವೇಶಕ್ಕೆ ಆಗಮಿಸಿದ್ದ ಜನಸಾಗರವನ್ನು ಕುರಿತು ಬರೆದುಕೊಂಡಿದ್ದಾರೆ.

ಹೇಗೆ ಪ್ರತಿಕ್ರಿಯಿಸಲಿ? ಯಾವ ರೀತಿ ಪ್ರತಿಕ್ರಿಯಿಸಲಿ? ನನ್ನ ಬಳಿ ಪದಗಳಿಲ್ಲ. ನಿಮ್ಮ ಈ ಪ್ರೀತಿಗೆ, ಅಭಿಮಾನಕ್ಕೆ ಏನೆಂದು ಪ್ರತಿಕ್ರಿಯಿಸಲಿ? ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ, ಮಂಡ್ಯದ ನನ್ನ ಜನತೆಯ ಈ ಅಭಿಮಾನಕ್ಕೆ ನನ್ನ ಜೀವನ ಪೂರ್ತಿ ನಿಮಗಾಗಿ ಬದುಕುತ್ತೇನೆ ಎಂದು ಬಣ್ಣಿಸಿದ್ದಾರೆ.

ಇದು ನನ್ನ ಚುನಾವಣೆ ಖಂಡಿತವಾಗಿಯೂ ಅಲ್ಲ. ಇದು ಜನರ ಚುನಾವಣೆ. ಜನರಿಗಾಗಿ ನಡೆಯುತ್ತಿರುವ ಚುನಾವಣೆ. ನಾನು ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಮಾತ್ರ. ಈ ಚುನಾವಣೆಯಲ್ಲಿ ಅಭ್ಯರ್ಥಿ ಮಂಡ್ಯದ ಜನತೆ, ನಾನಲ್ಲ. ತಮ್ಮ ಅಭಿಪ್ರಾಯವನ್ನು ಸುಮಲತಾ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಹೇಗೆ ಪ್ರತಿಕ್ರಿಯಿಸಲಿ ಯಾವ ರೀತಿ ಪ್ರತಿಕ್ರಿಯಿಸಿಲಿ ಪದಗಳಿಲ್ಲ ನನ್ನ ಬಳಿ ಪದಗಳಿಲ್ಲ ..ನಿಮ್ಮ ಈ ಪ್ರೀತಿಗೆ ಅಭಿಮಾನಕ್ಕೆ ಏನೆಂದು…

Sumalatha Ambareesh ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮಾರ್ಚ್ 20, 2019