ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಮ್ಮನ ಪರ ನಿಲ್ಲುತ್ತೇನೆಂದ ಸಾರಥಿ

ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಕಾಂಗ್ರೆಸ್​ನಿಂದ ಟಿಕೇಟ್ ಸಿಗಲಿ, ಬಿಡಲಿ ಮಂಡ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಟಿ ಸುಮಲತಾ ಅಂಬರೀಶ್​ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಈ ಮಧ್ಯೆ ಸುಮಲತಾ ಅವರ ಪರ ಪ್ರಚಾರಕ್ಕೆ ತಾರೆಯರ ದಂಡು ತಯಾರಾಗುತ್ತಿದೆ.

ದತ್ತು ಪುತ್ರ ಎಂದೇ ಕರೆಯಲಾಗುತ್ತಿರುವ ನಟ ದರ್ಶನ್ ಈಗಾಗಲೇ ಅಮ್ಮನ ಜತೆ ನಿಲ್ಲುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ. ಈ ಬಗ್ಗೆ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ಸುಮಲತಾ ಅಮ್ಮನ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.

ಅಂಬಿ ಮಾಮ ಕುಟುಂಬ ಬೇರೆಯಲ್ಲ. ನಮ್ಮ ಕುಟುಂಬ ಬೇರೆ ಅಲ್ಲ. ಸುಮಲತಾ ಅಮ್ಮ ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೂ ನಾನು ಬದ್ಧನಾಗಿದ್ದೇನೆ. ಒಟ್ಟಾರೆ ನಾನು ಸುಮಲತಾ ಅಮ್ಮನ ಪರ ನಿಲ್ಲುತ್ತೇನೆ ಎಂದು ಘೋಷಣೆ ಕೂಗಿದ್ದಾರೆ. (ದಿಗ್ವಿಜಯ ನ್ಯೂಸ್​)