ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಲು ದರ್ಶನ್​ ಇರಬೇಕಾದರೆ ಬೇರೆಯವರ ಅವಶ್ಯಕತೆ ಬೇಕಾಗಿಲ್ಲ ಎಂದು ನಟ ಕಿಚ್ಚ ಸುದೀಪ್​ ತಿಳಿಸಿದ್ದಾರೆ.

ಸುಮಲತಾ ಅವರ ಪರ ಚುನಾವಣಾ ಪ್ರಚಾರಕ್ಕೆ ಹೋಗುತ್ತೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದ ಅವರು ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿಗೆ ಅಂಬರೀಷ್ ಅವರ​ ಸಾಧನೆಯೇ ಸಾಕು. ಜತೆಗೆ ದರ್ಶನ್​ ಕೂಡ ಪ್ರಚಾರಕ್ಕೆ ಹೋಗುವುದಾಗಿ ಹೇಳಿರುವುದರಿಂದ ಬೇರೆಯವರ ಅವಶ್ಯಕತೆ ಇಲ್ಲ ಎಂದು ನನಗನಿಸುತ್ತದೆ ಎಂದರು.

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನಗೆ ಇದುವರೆಗೂ ಸುಮಲತಾ ಅವರಿಂದ ಯಾವುದೇ ಬುಲಾವ್​ ಬಂದಿಲ್ಲ. ಸದ್ಯ ಪೈಲ್ವಾನ್​ ಚಿತ್ರದ ಚಿತ್ರೀಕರಣ ಮುಗಿದಿದೆ. ಕೋಟಿಗೊಬ್ಬ 3 ಚಿತ್ರದ ಶೂಟಿಂಗ್​ ಪ್ರಾರಂಭವಾಗಿದ್ದು, ನಾನು ಸಾಕಷ್ಟು ಬಿಜಿಯಾಗಿದ್ದೇನೆ. ಸದ್ಯ ನನ್ನ ಗಮನ ನನ್ನ ಚಿತ್ರಗಳ ಮೇಲಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

One Reply to “ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​”

Comments are closed.