ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ, ಹಣದ ಹೊಳೆ ಹರಿದಿದೆ: ಸುಮಲತಾ ಅಂಬರೀಷ್‌

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಷ್‌ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಗೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಸುಮಲತಾ, ಮತದಾರರ ಜತೆ ಸರದಿಯಲ್ಲಿ ನಿಂತು ಮತದಾನ ಮಾಡಿದರು.

ಮತದಾನ ಮಾಡಿದ ಬಳಿ ಮಾಧ್ಯಮವರ ಜತೆ ಮಾತನಾಡಿ, ನ್ಯಾಯ ಸಮ್ಮತ ಚುನಾವಣೆ ನಡೆದಿಲ್ಲ. ಹಣದ ಹೊಳೆ ಹರಿದಿದೆ. ಆದರೆ, ಮತದಾರರು ಹಣದ ಆಮಿಷಕ್ಕೆ ಮಣಿಯದೆ ಸ್ವಾಭಿಮಾನಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Leave a Reply

Your email address will not be published. Required fields are marked *