ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ

ಮೈಸೂರು: ಮಂಡ್ಯದಲ್ಲಿ ಜನರ ರೆಸ್ಪಾನ್ಸ್ ಚೆನ್ನಾಗಿದೆ. ಜನರು ತುಂಬಾ ಧೈರ್ಯದಿಂದ ಮಾತನಾಡುತ್ತಿದ್ದಾರೆ. ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಯಾವುದೇ ನಿರ್ಧಾರವಾಗಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಪೋರ್ಟ್ ಮಾಡುತ್ತಿದ್ದಾರೆ. ಅವರಿಗೂ ತಮ್ಮ ಅಸ್ತಿತ್ವದ ಪ್ರಶ್ನೆ ಆಗಿದೆ. ಇಂದು ಬೇರೆಯವರಿಗೆ ಮತ ಹಾಕಿ ಎಂದು ಹೇಳಿ, ನಾಳೆ ಅವರು ಏನೆಂದು ಕೇಳಬೇಕು. ನಾಳೆ ನಮಗೆ ಕೊಡಿ ಅಂತ ಹೇಳೋಕೆ ಅವರಿಗೆ ಆಗುವುದಿಲ್ಲ. ಇದು ಮಾನದ ಪ್ರಶ್ನೆ ಎಂದರು.

ಮಂಡ್ಯ ಬಿಟ್ಟರೆ ನಾನು ಬೇರೆ ಎಲ್ಲೂ ನಿಲ್ಲುವುದಿಲ್ಲ. ಯಾವ ಹುದ್ದೆಗಳ ಅವಶ್ಯಕತೆ ನನಗೆ ಬೇಡ. ಬಿಜೆಪಿ ಬೆಂಬಲ ವಿಚಾರವಾಗಿ ಯಾರೂ ಈವರೆಗೆ ನನ್ನನ್ನು ಸಂಪರ್ಕ ಮಾಡಿಲ್ಲ. ಬಂದರೆ ಚರ್ಚೆ ಮಾಡಿ ನನ್ನ ನಿರ್ಧಾರ ತಿಳಿಸುತ್ತೇನೆ. ಜನರನ್ನು ಸಂಪರ್ಕಿಸುತ್ತಿದ್ದೇನೆ. ಜನರ ಮನಸ್ಥಿತಿಯನ್ನು ತಿಳಿಯುತ್ತಿದ್ದೇನೆ. ನನಗೆ ಸಮಯ ಕಡಿಮೆ ಇದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)