ಸುಮಲತಾ ರೋಡ್​ ಶೋನಲ್ಲಿ ರಾರಾಜಿಸುತ್ತಿವೆ ಕೈ, ಕಮಲ ಬಾವುಟ: ರಣಕಹಳೆ ಊದಿದ ಕಾರ್ಯಕರ್ತರು

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​​ಗೆ ರೈತ ರಣಕಹಳೆ ಊದುತ್ತಿರುವ ಚಿಹ್ನೆ ನಿನ್ನೆಯಷ್ಟೇ ಸಿಕ್ಕಿದ್ದು ಇಂದು ಕಾರ್ಯಕರ್ತರು ರಣಕಹಳೆ ಊದುವ ಮೂಲಕ ಸುಮಲತಾ ಅವರ ಪ್ರಚಾರ ನಡೆಸುತ್ತಿದ್ದಾರೆ.
ಇಂದು ಸುಮಲತಾ ಕೀಲಾರ ಗ್ರಾಮದಿಂದ ಪ್ರಚಾರ ಆರಂಭಿಸಿದ್ದು ಅವರಿಗೆ ಮಾಜಿ ಶಾಸಕ ಎಚ್​.ಬಿ.ರಾಮು ಸೇರಿ ಕಾಂಗ್ರೆಸ್​, ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್​ ನೀಡಿದರು.

ದೇಶದ ಎಲ್ಲ ಕಡೆ ಕಾಂಗ್ರೆಸ್​-ಬಿಜೆಪಿ ಹಾವು-ಮುಂಗುಸಿಯಂತೆ ಚುನಾವಣೆ ಎದುರಿಸುತ್ತಿದ್ದರೆ ಇತ್ತ ಕೀಲಾರ ಗ್ರಾಮದಲ್ಲಿ ನಡೆದ ಸುಮಲತಾ ರೋಡ್​ ಶೋನಲ್ಲಿ ಕಾಂಗ್ರೆಸ್​, ಬಿಜೆಪಿ ಕಾರ್ಯಕರ್ತರು ತಮ್ಮ ವೈರುಧ್ಯ ಧ್ವ ಮರೆತು ಎರಡೂ ಪಕ್ಷಗಳ ಬಾವುಟ ಹಿಡಿದು ಪಾಲ್ಗೊಂಡಿದ್ದು ವಿಶೇಷವೆನಿಸಿತು.