ಮಂತ್ರಾಲಯದಲ್ಲಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ 8 ರಿಂದ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಫೆ.8 ರಿಂದ 10ರವರೆಗೆ ಶ್ರೀಮಠದ ಪೂರ್ವ ಪೀಠಾಧಿಪತಿಗಳಾದ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ ಹಾಗೂ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.

ಫೆ.8ರಂದು ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ನಿಂದ ಬೆಳಗ್ಗೆ ಸಾಮೂಹಿಕ ಭಜನೆ ನಡೆಯಲಿದೆ. 9.30ಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜ್ಞಾನ ಯಜ್ಞದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ 4ಕ್ಕೆ ವ್ಯಾಕ್ಯಾರ್ಥ ಗೋಷ್ಠಿ, ರಾತ್ರಿ 7ಕ್ಕೆ ವಿದ್ವಾಂಸರಿಂದ ಪ್ರವಚನ, 7.30ರಿಂದ ಚೆನ್ನೈನ ಪ್ರಣೀತ್ ಪಂಡಿತರಿಂದ ಸ್ಯಾಕ್ಸೋಫೋನ್ ವಾದನ ಜರುಗಲಿದೆ.

ಫೆ.9ರಂದು ಬೆಳಗ್ಗೆ 8.30ಕ್ಕೆ ರಥೋತ್ಸವ, ವಿದ್ವಾಂಸರಿಂದ ಪ್ರವಚನ, ಮಧ್ಯಾಹ್ನ 12ಕ್ಕೆ ಸಂಸ್ಥಾನ ಪೂಜೆ, ಸಂಜೆ 6.30ಕ್ಕೆ ವಿದ್ವಾಂಸರಿಂದ ಪ್ರವಚನ, ರಾತ್ರಿ 7.30ಕ್ಕೆ ಶೇಷಗಿರಿದಾಸ್‌ರಿಂದ ದಾಸವಾಣಿ ಹಾಗೂ ರಾತ್ರಿ 8.30ಕ್ಕೆ ಶ್ರೀಮಠದ ಪ್ರಾಂಗಣದಲ್ಲಿ ಉತ್ಸವಗಳು ನಡೆಯಲಿವೆ.

ಫೆ.10ರಂದು ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನಿಂದ ಶ್ರೀಹರಿಕಥಾಮೃತಸಾರ ಪಾರಾಯಣ ನಡೆಯಲಿದೆ. ಬೆಳಗ್ಗೆ 9ಕ್ಕೆ ವಿದ್ವಾಂಸರಿಂದ ಪ್ರವಚನ, ಸಂಜೆ 6.30ಕ್ಕೆ ಪಾರಾಯಣದ ಸಮಾರೋಪ ಜರುಗಲಿದೆ. ರಾತ್ರಿ 7.30ರಿಂದ ಬೆಂಗಳೂರಿನ ಹುಸೇನ್‌ದಾಸ್‌ರಿಂದ ದಾಸವಾಣಿ ಜರುಗಲಿದೆ.