More

    ಆತ್ಮಹತ್ಯೆಗಳ ಕಥಾ ಸಂಗಮ ಸೆಪ್ಟಂಬರ್​ 10

    ಬೆಂಗಳೂರು: ಏಳು ಕಥೆಗಳನ್ನು ಒಳಗೊಂಡ ‘ಕಥಾಸಂಗಮ’ ಚಿತ್ರ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಇದೀಗ ಏಳು ಕಥೆಗಳಿರುವ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ. ‘ಕಥಾಸಂಗಮ’ದ ಕಥೆಗಳಲ್ಲಿ ಒಂದಕ್ಕೊಂದು ಸಂಬಂಧ ಇರಲಿಲ್ಲ.

    ಆದರೆ ಇಲ್ಲಿ ಏಳೂ ಕಥೆಗಳಿಗೆ ಸಂಬಂಧ ಕಲ್ಪಿಸುವ ಒಂದು ಸಾಮಾನ್ಯ ಸಂಗತಿ ಇದೆ, ಅದುವೇ ಆತ್ಮಹತ್ಯೆ. ‘ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದು ಆತ್ಮಹತ್ಯೆ ಆಗುತ್ತಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಸಿನಿಮಾ ಮೂಲಕ ಸಂದೇಶ ನೀಡಿದ್ದೇವೆ. ರೈತರ, ಪ್ರೇಮಿಗಳ, ವಿದ್ಯಾರ್ಥಿಗಳ ಮತ್ತು ಯುವಕರ ಆತ್ಮಹತ್ಯೆ ತಡೆಯುವ ಸಲುವಾಗಿ ಏಳು ಕಥೆಗಳನ್ನು ಒಟ್ಟಾಗಿಸಿ ಈ ಚಿತ್ರ ಮಾಡುತ್ತಿದ್ದೇನೆ. ಇದಕ್ಕೆ ನನ್ನ ಬಹುಕಾಲದ ಕಲಾವಿದ ಗೆಳೆಯರನ್ನೇ ಪಾತ್ರವಾಗಿಸಿಕೊಂಡಿದ್ದೇನೆ’ ಎಂದು ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕ ಸಾಯಿಪ್ರಕಾಶ್. ಬೆಂಗಳೂರಿನ ಉತ್ತರಹಳ್ಳಿಯ ಬಿಜಿಎಸ್ ಗ್ಲೋಬಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇತ್ತೀಚೆಗೆ ಈ ಚಿತ್ರದ ಶೂಟಿಂಗ್ ನಡೆಯಿತು. ರಮೇಶ್ ಭಟ್ ಲಾಯರ್, ಸಿಹಿ ಕಹಿ ಚಂದ್ರು ಮುಸ್ಲಿಂ ಗುರು, ಶಿವಕುಮಾರ್ ಕ್ರಿಶ್ಚಿಯನ್ ಪಾದ್ರಿ, ರವೀಂದ್ರ ಪೊಲೀಸ್ ಅಧಿಕಾರಿ, ಶಶಿಕುಮಾರ್ ವೈದ್ಯರಾಗಿದ್ದ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ. ಜ. 2ರಂದು ಮುಹೂರ್ತ ನಡೆಸಲಾಗಿರುವ ಈ ಚಿತ್ರದ ಶೀರ್ಷಿಕೆ ‘ಸೆಪ್ಟೆಂಬರ್ 10’. ಸೇನಾಧಿಕಾರಿ ಕ್ಯಾ.ಜಿ.ಜಿ. ರಾವ್ ಅವರ ತೆಲುಗು-ಇಂಗ್ಲಿಷ್ ಕೃತಿ ‘ಟ್ರಾನ್ಸ್​ಫಾರ್ವಿುಂಗ್ ದ ವರ್ಲ್ಡ್ ಇನ್ಟು ದಿ ಸೂಸೈಡಿಂಗ್ ಫ್ರೀ ಡೇ’ ಇದಕ್ಕೆ ಪ್ರೇರಣೆ ಅಂತೆ.

    ಸೆ. 10‘ವರ್ಲ್ಡ್ ಸೂಸೈಡ್ ಪ್ರಿವೆನ್ಸನ್ ಡೇ’ ಆಗಿರುವುದರಿಂದ ಚಿತ್ರಕ್ಕೆ ‘ಸೆಪ್ಟೆಂಬರ್ 10’ ಎಂಬ ಶೀರ್ಷಿಕೆ ಇಡಲಾಗಿದೆ. ‘ಎಲ್ಲರಿಗೂ ಅವರದ್ದೇ ಕಷ್ಟಗಳು ಇರುತ್ತವೆ. ಆದರೆ ಆತ್ಯಹತ್ಯೆಯಂಥ ತಪ್ಪು ನಿರ್ಧಾರಗಳಿಂದ ಇಡೀ ಕುಟುಂಬ ತೊಂದರೆ ಅನುಭವಿಸುವಂತಾಗಬಾರದು. ಎಲ್ಲವನ್ನೂ ಬೋಲ್ಡ್ ಆಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ಡಾಕ್ಟರ್ ಪಾತ್ರ ಮಾಡಿರುವ ಶಶಿಕುಮಾರ್. ಜೈ ಸಿಂಹ ಮತ್ತು ಆರಾಧ್ಯ ಈ ಚಿತ್ರದಲ್ಲಿ ನಾಯಕ-ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts