18.5 C
Bangalore
Monday, December 16, 2019

ಆತ್ಮಾಹುತಿ ಸ್ಮಾರಕಗಳು

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಹೊಯ್ಸಳ ರಾಜರಿಗಾಗಿ ಆತ್ಮಾಹುತಿ ಮಾಡಿಕೊಂಡವರನ್ನು ನೆನಪಿಸುವ ಸ್ಮಾರಕಗಳು ಮಂಡ್ಯ ಜಿಲ್ಲೆಯ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿವೆ. ಅಂದಿನ ಆತ್ಮಾರ್ಪಣೆಯ ವಿವರಗಳನ್ನು ತಿಳಿದರೆ ಇತಿಹಾಸದ ಅದ್ಭುತ ಪುಟವೊಂದನ್ನು ತೆರೆದಂತಾಗುತ್ತದೆ.

| ಕೆಂಗೇರಿ ಚಕ್ರಪಾಣಿ

ಹೊಯ್ಸಳರ ಕಾಲದಲ್ಲಿ ರಾಜನಿಗೆ ನಿಷ್ಠರಾಗಿ, ಆತನ ಅಂಗರಕ್ಷಕರಂತಿದ್ದು ರಾಜನಿಗಾಗಿ ತಮ್ಮ ಜೀವವನ್ನೇ ಬಲಿಕೊಡುವ, ಒಂದು ವೇಳೆ ರಾಜನು ಮರಣಿಸಿದರೆ ತಾವೂ ಆತ್ಮಾರ್ಪಣೆ ಮಾಡಿಕೊಳ್ಳುವ ಒಂದು ತಂಡವೇ ಇತ್ತು. ಇವರನ್ನು ಗರುಡರೆಂದು ಕರೆಯಲಾಗುತ್ತಿತ್ತು. ಗರುಡರು ಕಾಲಿಗೆ ಕಡಗವನ್ನು ತೊಟ್ಟುಕೊಂಡು ಪ್ರತಿಜ್ಞಾಪೂರ್ವಕವಾಗಿ ರಾಜನಿಗೆ ನಿಷ್ಠರಾಗಿರುತ್ತಿದ್ದರು. ವಿಷ್ಣುವಿನ ವಾಹನ ಗರುಡನು ಹೇಗೆ ಸ್ವಾಮಿನಿಷ್ಠೆಯಲ್ಲಿ ಅತ್ಯಂತ ಶ್ರೇಷ್ಠನೋ ಅದೇ ರೀತಿ ಇವರು ತಮ್ಮ ದೊರೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದರು. ಈ ವೀರರನ್ನು ಲೆಂಕರು ಎಂದು, ಸ್ತ್ರೀಯರನ್ನು ಲೆಂಕತಿಯರೆಂದು ಕರೆಯಲಾಗುತ್ತಿತ್ತು. ಗರುಡ ಪದ್ಧತಿಗೆ ಸ್ಪಷ್ಟ ನಿದರ್ಶನ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಹುಣಸೇಶ್ವರ ದೇವಾಲಯದ ದಕ್ಷಿಣಕ್ಕಿರುವ ಸ್ತಂಭಗಳ ಮೇಲೆ ದೊರೆಯುತ್ತದೆ.

ಸುಮಾರು ಹದಿನೈದು ಅಡಿ ಎತ್ತರದ ಕಂಬದ ಮೇಲಿರುವ ಮಟ್ಟಸವಾದ ಪೀಠದ ಮೇಲೆ ಆನೆಗಳ ಮೇಲೆ ವೀರರು ಮತ್ತು ಆತನ ಪತ್ನಿಯರ ಶಿಲ್ಪಗಳಿವೆ. ರಾಜರಿಗಾಗಿ ಏಳು ತಲೆಮಾರುಗಳು ಅನ್ವಯಾಗತ ಲೆಂಕವಾಳಿಯಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ವಿವರಗಳು ಅಲ್ಲಿರುವ ಶಾಸನಗಳಲ್ಲಿ ಹಾಗೂ ಶಿಲ್ಪಗಳಲ್ಲಿ ದೊರೆಯುತ್ತದೆ. ಶಾಸನದಲ್ಲಿರುವ ಸಮಗ್ರ ಮಾಹಿತಿಯನ್ನು ಶಿಲ್ಪಗಳಲ್ಲಿ ಬಿಂಬಿಸಲಾಗಿದೆ. ಹೊಯ್ಸಳ ಅರಸು ಮನೆತನದ ಆರಂಭ ಕಾಲದಿಂದಲೂ ಅಂದರೆ ಎರೆಯಂಗ(1098)ರಿಂದ ಹೊಯ್ಸಳರ ಕೊನೆಯ ಹಂತ(1252)ವರೆಗೂ ಒಂದೇ ಕುಟುಂಬದವರು ಪರಂಪರಾಗತರಾಗಿ ಗರುಡರಾಗಿದ್ದ ಘಟನೆ ಮನಮಿಡಿಯುತ್ತದೆ.

ಆತ್ಮಾರ್ಪಣೆ: ಮುಗಿಲ ಕುಲಕ್ಕೆ ಸೇರಿದ ಮಹಾಸಾಮಂತ ಗಂಗತಾಯಿಯ ಗಂಡ ನಾರಾಯಣ ಸೆಟ್ಟಿ, ಮಾರವ್ವೆ ನಾಯಕಿಯ ಜತೆ ಐವರು ಲೆಂಕರು ಹೊಯ್ಸಳರ ದೊರೆ ಎರೆಯಂಗನ ಕಾಲದಲ್ಲಿ ಮೊದಲ ಬಾರಿ ಆತ್ಮಾರ್ಪಣೆ ಮಾಡಿಕೊಳ್ಳುವರು. ನಂತರದ ಕಾಲದಲ್ಲಿ ಮಾರಿ ಸೆಟ್ಟಿ ಮಾಚವ್ವನಾಯಕಿ ಮತ್ತು ಐವರು ಲೆಂಕರು ಕೂರೆಯನಾಯಕ-ಮಾರವ್ವೆ ನಾಯಕಿ, ಚಿಕ್ಕ ಮಾರೆವ್ವೆ ನಾಯಕಿ, ಸಿವೆ ನಾಯಕಿ, ಲಿಖಿಯನಾಯಕ-ಗಂಗಾದೇವಿ, ಕನ್ನೆಯ ನಾಯಕ ಮತ್ತು ಆತನ ಪತ್ನಿಯರಾದ ವೋಮವ್ವೆ, ಜವ್ವನವ್ವೆ, ಕಲ್ಲವ್ವೆ ಮತ್ತು ಹತ್ತು ಜನ ಲೆಂಕತಿಯರು, ಇಪ್ಪತ್ತೊಂದು ಜನ ಲೆಂಕರು, ರಂಗನಾಯಕ- ಕೇಕವ್ವೆ, ಹೊನ್ನವ್ವೆ, ಮಂಚವ್ವೆ ಮತ್ತು ಹತ್ತು ಜನ ಲೆಂಕತಿಯರು, ಇಪ್ಪತ್ತು ಜನ ಲೆಂಕರು ತಮ್ಮ ದೊರೆಗಾಗಿ ಗರುಡ ಪದ್ಧತಿಯನ್ನು ಸ್ವೀಕರಿಸಿ ಆತ್ಮಾರ್ಪಣೆ ಮಾಡಿಕೊಂಡಿರುವ ದಾಖಲೆ ದೊರೆಯುತ್ತದೆ. ಈ ರೀತಿಯಾಗಿ ಇಡೀ ಕುಟುಂಬವೇ ಪಾರಂಪರಿಕವಾಗಿ ಅನ್ವಯಾಗತ ಲೆಂಕವಾಳಿಯಾಗಿ ತಮ್ಮ ಪತ್ನಿಯರ ಸಮೇತರಾಗಿ ಆತ್ಮ ಬಲಿದಾನಗೈದ ಅಪರೂಪದ ದಾಖಲೆಯನ್ನು ಅಗ್ರಹಾರ ಬಾಚಹಳ್ಳಿಯ ಗರುಡ ಸ್ತಂಭಗಳು ಹೊತ್ತಿವೆ. ಇಲ್ಲಿನ ಪ್ರತಿ ಕಂಬದ ಮೇಲಿರುವ ಆನೆಗಳ ಮೇಲೆ ಗರುಡನ ಶಿಲ್ಪವಿದ್ದು, ಅದರ ಎದುರಿಗೆ ವೀರರ ಶಿಲ್ಪಗಳಿವೆ. ಆನೆಯ ಕೆಳಗಿನ ಪೀಠದಲ್ಲಿ ವೀರರು ಯಾವ ರೀತಿ ಆತ್ಮ ಬಲಿದಾನ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸುವ ಶಿಲ್ಪಗಳಿವೆ. ಒಬ ್ಬೕರ ಆನೆಯಿಂದ ತುಳಿಸಿಕೊಂಡು ಸತ್ತರೆ, ಮತ್ತೊಬ್ಬ ಭರ್ಜಿಯಿಂದ ಚುಚ್ಚಿಸಿಕೊಂಡು ಮರಣಿಸುತ್ತಾನೆ. ಮಗದೊಬ್ಬ ಗರುಡ ಸ್ತಂಭಕ್ಕೆ ಕತ್ತಿಯನ್ನು ಬಿಗಿದು ಅದಕ್ಕೆ ಅಪ್ಪಿಕೊಂಡು ಸಾವನ್ನಪ್ಪಿರುವ ಚಿತ್ರಣವಿದೆ. ಇಂತಹ ಅದ್ಭುತವಾದ ಮನಮಿಡಿಯುವ ಗರುಡಗಂಬಗಳನ್ನು ಹೊಂದಿರುವ ಅಗ್ರಹಾರ ಬಾಚಹಳ್ಳಿಯು ಪ್ರಚಾರದ ಕೊರತೆಯಿಂದ ಅಷ್ಟಾಗಿ ಬೆಳಕಿಗೆ ಬಂದಿಲ್ಲ.

ಪುರಾತನ ದೇವಾಲಯ: ಅಗ್ರಹಾರ ಬಾಚಹಳ್ಳಿಯ ಸ್ಮಾರಕಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಅದರ ಬದಿಯಲ್ಲಿರುವ ಹೊಯ್ಸಳರ ಕಾಲದ ಹುಣಸೇಶ್ವರ (ಶಾಸನದಲ್ಲಿ ಹೊಯ್ಸಳೇಶ್ವರ) ದೇವಾಲಯ ನೋಡಲು ಸಿಗುತ್ತದೆ. ಹುಣಸೇಶ್ವರ ದೇವಾಲಯವು ಏಕಕೂಟ ಶಿವಾಲಯವಾಗಿದ್ದು, ಗರ್ಭಗೃಹ, ಅಂತರಾಳ, ನವರಂಗ ಹಾಗೂ ಸಣ್ಣ ಮುಖಮಂಟಪಗಳಿಂದ ಕೂಡಿದೆ. ದೇವಾಲಯಕ್ಕೆ ಅಂದವಾದ ಶಿಖರವಿದೆ. ದೇವಾಲಯದ ಹೊರಭಿತ್ತಿಯು ಸರಳವಾಗಿದೆ. ದೇವಾಲಯದ ಶಿಖರವು ದ್ವಿತಳ ಮಾದರಿಯಲ್ಲಿದ್ದು, ಶಿಖರದಲ್ಲಿ ಬ್ರಹ್ಮ, ಸೂರ್ಯ ದೇವ, ನಟರಾಜ, ನಾರಾಯಣ ಮುಂತಾದ ದೇವತೆಗಳ ಮೂರ್ತಿಗಳಿವೆ. ಗರ್ಭಗುಡಿಯಲ್ಲಿ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವಿದೆ. ನವರಂಗದಲ್ಲಿ ಪ್ರಧಾನವಾಗಿ ನಾಲ್ಕು ಕಂಬಗಳಿದ್ದು ಕಲಾತ್ಮಕವಾಗಿವೆ. ಮುಖಮಂಟಪದಲ್ಲಿ ನಂದಿಯ ಶಿಲ್ಪವಿದೆ.

ಹುಣಸೇಶ್ವರ ದೇವಾಲಯ ಹಾಗೂ ಗರುಡಕಂಬಗಳು ಶಿಥಿಲವಾಗಿದ್ದವು. ಗರುಡ ಕಂಬಗಳು ವಾಲಿಕೊಂಡು ಹಾಳಾಗುವ ಹಂತವನ್ನು ತಲುಪಿದ್ದವು. ಸ್ಥಳೀಯ ಗ್ರಾಮಸ್ಥರು ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಿ ಜೀಣೋದ್ಧಾರ ಮಾಡುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧಮೋತ್ಥಾನ ಟ್ರಸ್ಟ್​ನ ಸಂಸ್ಥಾಪಕರಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಗಮನಕ್ಕೆ ತಂದರು. ಅವರು ಆತ್ಮ ಬಲಿದಾನದ ಸ್ಮಾರಕಗಳನ್ನು ಗಮನಿಸಿ ತ್ವರಿತಗತಿಯಲ್ಲಿ ಗರುಡಗಂಭಗಳು ಹಾಗೂ ದೇವಾಲಯವನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಸ್ಥಳೀಯರ ಸಹಕಾರ, ಟ್ರಸ್ಟಿನ ವತಿಯಿಂದ ಜೀಣೋದ್ಧಾರ ಮಾಡಿ ರಕ್ಷಿಸಿದ್ದಾರೆ. ಇಲ್ಲದಿದ್ದಲ್ಲಿ ನಮ್ಮ ನಾಡಿನ ಅತ್ಯಂತ ಮಹತ್ವದ ಸ್ಮಾರಕಗಳು ನೆಲಕಚ್ಚಿ ಹಾಳಾಗುತ್ತಿದ್ದವು.

ಹೋಗುವುದು ಹೇಗೆ?

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿ ಅಗ್ರಹಾರ ಬಾಚಹಳ್ಳಿಯಿದೆ. ಕೃಷ್ಣರಾಜಪೇಟೆ-ಸಂತೇಬಾಚಹಳ್ಳಿ ರಸ್ತೆಯಲ್ಲಿ ನಾಲ್ಕು ಕಿ.ಮೀ. ಸಾಗಿದರೆ ಅಗ್ರಹಾರ ಬಾಚಹಳ್ಳಿಯ ತಿರುವು ಸಿಗುತ್ತದೆ. ಬಾಚಹಳ್ಳಿ ತಿರುವುನಲ್ಲಿ ಎಡಕ್ಕೆ ತಿರುಗಿ ಒಂದು ಕಿ.ಮೀ. ಸಾಗಿದರೆ ಆತ್ಮ ಬಲಿದಾನದ ಅಪರೂಪದ ಸ್ಮಾರಕವಿರುವ ತಾಣವನ್ನು ಸೇರಬಹುದು.

ಕಾಳಗದ ಶಿಲ್ಪ

ಅಗ್ರಹಾರ ಬಾಚಹಳ್ಳಿಯಲ್ಲಿ ದೊಡ್ಡಮಟ್ಟದ ಕಾಳಗವೇ ನಡೆದಿರುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಅನೇಕ ವೀರಗಲ್ಲುಗಳು ದೊರೆತಿವೆ. ಇಲ್ಲಿರುವ ಒಂದು ವೀರಗುಡಿಯಲ್ಲಿ ಮಹಾಸಾಮಂತ ಬಚ್ಚೆಯ ನಾಯಕನು ಬಲ್ಲಾಳದೇವನಿಂದ ರಣವೀಳ್ಯವನ್ನು ಪಡೆದು ಕಳಚೂರಿಯ ಅರಸು ಸಂಕಮದೇವನ ವಿರುದ್ಧ ಹೋರಾಡಿ ವೀರಮರಣವನ್ನು ಹೊಂದಿರುವ ವೀರಗಲ್ಲಿದೆ. ವೀರಗಲ್ಲಿನ ಶಿಲ್ಪದಲ್ಲಿ ಕಾಳಗದ ದೃಶ್ಯಗಳನ್ನು ಬಹಳ ನೈಜವಾಗಿ ನಿರೂಪಿಸಲಾಗಿದೆ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...