ಆತ್ಮಹತ್ಯೆ ಮಾಡಿಕೊಂಡವನ ದೇಹ ಕಾಲುವೆಯಲ್ಲಿ ಪತ್ತೆ

ಪಾಲಬಾವಿ: ಕ್ರೂಷರ್ ವಾಹನ ಸಮೇತ ಘಟಪ್ರಭಾ ಎಡದಂಡೆ ಕಾಲುವೆೆಯಲ್ಲಿ ಬಿದ್ದಿದ್ದ ವ್ಯಕ್ತಿಯ ಶವ ಶಿರೋಳ ಗ್ರಾಮದ ಕಾಲುವೆಯಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.

ಸೆಪ್ಟಂಬರ್ 29ರಂದು ಬೆಳಗ್ಗೆ ಕ್ರೂಷರ್ ವಾಹನದೊಂದಿಗೆ ಈತ ಕಾಲುವೆಗೆ ಬಿದ್ದಿದ್ದ ಮಹಾಲಿಂಗಪುರ ಪಟ್ಟಣದ ನಿವಾಸಿ ಕಾಶಪ್ಪ ಉತ್ತೂರ(55) ಮೃತ ದೇಹ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ತೇಲಿ ಹೋಗಿತ್ತು.

ಹಾರೂಗೇರಿ ಪಿಎಸ್‌ಐ ನಿಂಗನಗೌಡ ಪಾಟೀಲ ಹಾಗೂ ಸಿಬ್ಬಂದಿ, ರಾಯಬಾಗ ಅಗ್ನಿಶಾಮಕ ದಳದ ಮುಖ್ಯಸ್ಥ ಸಾಂಬೋಗಿ ಹಾಗೂ ಸಿಬ್ಬಂದಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದರು. ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.