ರಾಷ್ಟ್ರಗೀತೆ ಹೇಳಿ ಬಳಿಕ ನೇಣುಬಿಗಿದುಕೊಂಡ ವ್ಯಕ್ತಿ: ಲೈವ್​ ವಿಡಿಯೋ ವೈರಲ್​

ತುಮಕೂರು: ಕೌಟುಂಬಿಕ ವಿಚಾರಕ್ಕೆ ಮನನೊಂದ ವ್ಯಕ್ತಿ ಲೈವ್​ ವಿಡಿಯೋ ಮಾಡಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿರಾ ತಾಲೂಕಿನ ಕೆ.ಕೆ.ಪಾಳ್ಯದ ನಿರಂಜನ್​(36). ಆತ್ಮಹತ್ಯೆಗೂ ಮೊದಲು ಫೇಸ್​ಬುಕ್​ ಲೈವ್​ನಲ್ಲಿ ವಿಡಿಯೋ ಮಾಡಿದ್ದ. ಅದರಲ್ಲಿ, ಎಲ್ಲರೂ ಮೋಸಮಾಡುತ್ತಾರೆ.

ತಂದೆಯವರನ್ನು ಬಿಟ್ಟು ಇನ್ನೆಲ್ಲರೂ ಅನ್ಯಾಯ ಮಾಡುವವರೇ. ಅದರಲ್ಲೂ ಹೆಂಗಸರನ್ನು ನಂಬಬೇಡಿ. ಪದೇಪದೆ ಮೋಸ ಮಾಡುತ್ತಲೇ ಇರುತ್ತಾರೆ. ಗಿಲ್ಟಿ ಶುಡ್​ ಬಿ ಪನಿಶ್ಡ್​ ಎನ್ನುತ್ತಾರೆ. ಆದರೆ ಭಾರತದಲ್ಲಿ ಅದು ಆಗುತ್ತಿಲ್ಲ ಎಂದು ಹೇಳಿದ್ದಾನೆ. ಸಾಯುವುದಕ್ಕೂ ಮೊದಲು ರಾಷ್ಟ್ರಗೀತೆ ಹಾಡಿದ್ದಾನೆ.

ನಿರಂಜನ್​ ಖಾಸಗಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.