ಶಿರಸಿ: ಸಾಲ ತೀರಿಸಲಾಗದೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಗಡೆಕಟ್ಟ- ಶಿವಳ್ಳಿಯ ಕಾಶಿಮನೆಯಲ್ಲಿ ಗುರುವಾರ ನಡೆದಿದೆ.

ಮಹಾಬಲೇಶ್ವರ ನಾಗು ಗೌಡ (28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಸೆಂಟ್ರಿಂಗ್ ಕೆಲಸಕ್ಕಾಗಿ ಜನರಲ್ಲಿ ಸಾಲ ಮಾಡಿಕೊಂಡಿದ್ದನು. ಸರಿಯಾಗಿ ಕೆಲಸವೂ ಸಿಗುತ್ತಿಲ್ಲ ಎಂದು ಕಳೆದ ಕೆಲವು ದಿನಗಳಿಂದ ಬೇಸರದಲ್ಲಿದ್ದನು. ಇದನ್ನೆ ಮನಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮುಂದಿನ ಅರಣ್ಯ ಪ್ರದೇಶದಲ್ಲಿರುವ ಮರದ ಟೊಂಗೆಗೆ ನೇಣು ಹಾಕಿಕೊಂಡಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.