ನರಗುಂದ: ಜೀವನದಲ್ಲಿ ಜಿಗುಪ್ಸೆಗೊಂಡು ವಿಷಕಾರಿ ಮಾತ್ರೆ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಬನಹಟ್ಟಿ ಗ್ರಾಮದ ರತ್ನವ್ವ ಮಹಾದೇವಪ್ಪ ಬೋಸ್ಲೆ (40) ಮೃತ ದುರ್ದೈವಿ. ಮಾತ್ರೆಗಳನ್ನು ಸೇವಿಸಿ ನರಳಾಡುತಿದ್ದಾಗ ಕುಟುಂಬಸ್ಥರು ನರಗುಂದದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ ಎಂದು ಮೃತಳ ಪತಿ ಮಹಾದೇವಪ್ಪ ಬೋಸ್ಲೆ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.