ಕೃಷಿಯತ್ತ ಒಲವು ಸಾಧಿಸಲಿ ಯುವ ಜನಾಂಗ

ಯಾದಗಿರಿ: ಮಾನವ ಜನ್ಮ ಮೂರು ಪ್ರಕಾರಗಳನ್ನು ಹೊಂದಿದೆ, ಎಲ್ಲರೂ ಸಂಸಾರಿಕ ಬದುಕಿನ ಜತೆಗೆ ಪರೋಪಕಾರಿ ಕೆಲಸಗಳನ್ನು ಮಾಡಿದಾಗ ಮಾತ್ರ ಬದುಕು ಸಾರ್ಥಕ ಎನಿಸುತ್ತದೆ ಎಂದು ಬೃಹನ್ಮಠ ಹೊಟಗಿಯ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಬುಧುವಾರ ಸಂಜೆ ಇಲ್ಲಿಗೆ ಸಮೀಪದ ಸೂಗುರು (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರರ 24ನೇ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ನಡೆದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಯುವ ಜನತೆ ಶಿಕ್ಷಣದಲ್ಲಿ ಹಲವು ಪದವಿ ಗಳಿಸಿದರೂ ಅವರಿಗೆ ಇಂದು ಸೂಕ್ತ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಅವರು ಕೃಷಿ ಕ್ಷೇತ್ರದತ್ತ ಆಸಕ್ತಿ ವಹಿಸಿ ಆಧುನಿಕ ಕೃಷಿ ಹಾಗೂ ಸಾವಯುವ ಕೃಷಿ ಪದ್ಧತಿಯನ್ನು ಅನುಸರಿಸದರೆ ಸಕರ್ಾರಿ ನೌಕರಿಯಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚಾಗಿ ಆರ್ಥಿಕ ಲಾಭ ಸಿಗುವ ಜತೆಗೆ ಆತ್ಮ ತೃಪ್ತಿಯ ಬದುಕು ಸಿಗುತ್ತದೆ ಎಂದರು.

ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಸದಾಶಿವ ಸ್ವಾಮೀಜಿ, ಈ ಭರತ ನಾಡಿನಲ್ಲಿ ಕಾಲ ಕಾಲಕ್ಕೆ ಮಹಾತ್ಮರು ಜನ್ಮ ತಾಳಿ ತಮ್ಮ ಆದ್ಯಾತ್ಮಿಕ ಶಕ್ತಿಯಿಂದ ಮನುಕುಲದ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ್ದಾರೆ ಅವರ ಸಾಲಿನಲ್ಲಿ ಭೋಜಲಿಂಗೇಶ್ವರರು ಒಬ್ಬರು. ಅವರು ತಮ್ಮಲ್ಲಿಗೆ ಬಂದ ಎಲ್ಲ ಜಾತಿಯ ಜನರನ್ನು ಅಪ್ಪಿಕೊಂಡು ಅನೇಕ ಪವಾಡಗಳನ್ನು ಮಾಡುವ ಮೂಲಕ ಸಮಾಜಕ್ಕೆ ಸಮಾನತೆ, ಸಾಮರಸ್ಯದ ಚಿಂತನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಧಮರ್ಾಚರಣೆ ಅಳವಡಿಸಿಕೊಂಡು ಜೀವನ ನಡೆಸಿದಾಗ ಮಾತ್ರ ಹೊಸ ಬದಲಾವಣೆಯತ್ತ ಸಾಗಲು ಸಹಕಾರಿಯಾಗುತ್ತದೆ. ಶ್ರೀಮಠದಲ್ಲಿ ಭಕ್ತರ ಸಹಕಾರದಿಂದ ತ್ರಿವಿಧ ದಾಸೋಹ ನಿರಂತರ ಮುಂದುವರಿಸಿಕೊಂಡು ಬರಲಾಗಿದೆ. ಭಗವಂತನ ಕೃಪೆಯಿಂದ ರೈತರ ಸಂಕಷ್ಟಗಳು ದೂರವಾಗಲಿ ಎಂದು ಹಾರೈಸಿದರು.

ಇದೇ ವೇಳೆ ಯಾದಗಿರಿ ತಾಲೂಕಿನ ಮುಂಡರಗಿ ತಾಂಡಾದ ಶತಾಯುಷಿ ರೈತ ಮಹಿಳೆ ಚಂದ್ರಿಬಾಯಿ ರಾಠೋಡ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಎಲಿಗಾರ, ಈರಣ್ಣ ಬಲಕಲ್, ಶತಾಯುಷಿ, ರೈತ ಮಹಿಳೆ ಚಂದ್ರಿಬಾಯಿ ರಾಥೊಡ್, ಶಿವರಾಜ ಶಾಸ್ತ್ರಿಗಳು ತಾವರಗೇರಾ, ಮಾಣಿಕರೆಡ್ಡಿ ಕುರಕುಂದಾ, ಸುರೇಶ ಕೋಟಿಮನಿ, ಶಿವನಗೌಡ ಪಾಟೀಲ್, ಮಹೇಶ ಪಾಟೀಲ್, ಸುರೇಶ ಆಕಳ, ಮಡಿವಾಳಪ್ಪ, ಎಸ್.ಎಸ್.ಜುಗೇರಿ, ವಿಜಯಕುಮಾರ ದೇವಕಾರ, ಮಲ್ಲಯ್ಯ ಕಸಬಿ ಇದ್ದರು.