ಸುಗ್ಗಿ ಸಂಭ್ರಮ| ಸಿಹಿ ಹಂಚಿದೆವು ಜಗಕೆಲ್ಲ

ಎಳ್ಳು- ಬೆಲ್ಲವ ಬೀರಿ, ಎಲ್ಲರಿಗೂ ಸಿಹಿಯ ಹಂಚುತ ಮಕರ ಸಂಕ್ರಮಣ ಪರ್ವಕಾಲವನ್ನು ನಾಡಿನೆಲ್ಲೆಡೆ ಸಂಭ್ರಮಿಸಿದ್ದಾರೆ. ಮನೆಮನೆಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಅಂತೆಯೇ ಈ ಸಂತಸದ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂಬ ವಿಜಯವಾಣಿ ಕರೆಗೆ ಎಲ್ಲೆಡೆಯಿಂದ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಹಬ್ಬದ ಆನಂದವನ್ನು ಸೆಲ್ಪಿ, ಫೋಟೋಗಳಲ್ಲಿ ಸೆರೆ ಹಿಡಿದು ನಮಗೆ ಕಳುಹಿಸಿದ್ದಾರೆ. ಆಯ್ದ ಕೆಲವು ಇಲ್ಲಿವೆ.