ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಹುನಕುಂಟಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 65/2 ಜಮೀನಿನಲ್ಲಿ ಬೆಳೆದಿದ್ದ 3.30 ಎಕರೆಯಲ್ಲಿನ ಕಬ್ಬಿನ ಬೆಳೆ ಬೆಂಕಿಗೆ ಕೆನ್ನಾಲಿಗೆಗೆ ಶುಕ್ರವಾರ ಆಹುತಿಯಾಗಿದೆ.
ಕಬ್ಬಿನ ಬೆಳೆಯ ಮೇಲೆ ಹಾಯ್ದುಹೋಗಿದ್ದ 3 ಲೈನ್ ಕೇಬಲ್ಗಳು ಗಾಳಿಗೆ ಪರಸ್ಪರ ಉಜ್ಜಿ ರ್ಷಣೆಯಾಗಿ ಸಿಡಿದ ಬೆಂಕಿಯ ಕಿಡಿಗಳು ಈ ಅವಡಕ್ಕೆ ಕಾರಣ ಎಂದು ರೈತ ಮಂಜುನಾಥ ಯಮನಪ್ಪ ಮಡಿವಾಳರ ತಿಳಿಸಿದ್ದಾರೆ.
ವಿಷಯ ತಿಳಿದು ಮುದ್ದೇಬಿಹಾಳದಿಂದ 15&20 ಕಿ.ಮೀ. ಅಂತರದಲ್ಲಿರುವ ಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಹನ ಸಮೇತ ತೆರಳುವಷ್ಟರಲ್ಲಿ ಬೆಂಕಿ ಭಾರಿ ಪ್ರಮಾಣದಲ್ಲಿ ಹತ್ತಿಕೊಂಡಿತ್ತು.
ಅಗ್ನಿಶಾಮಕದವರು ರೈತರೊಂದಿಗೆ ಹರಸಾಹಸಪಟ್ಟು ಬೆಂಕಿ ನಂದಿಸಿದ್ದರಿಂದ ಹೆಚ್ಚುವರಿಯಾಗಿ ಒಂದೂವರೆ ಎಕರೆ ಕಬ್ಬು ಬೆಂಕಿಯಿಂದ ಬಚಾವಾಗಿದೆ.
ಈ ಕುರಿತು ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ. ತನಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಹಾನಿಗೀಡಾದ ರೈತ ಮಂಜುನಾಥ ಮನವಿ ಮಾಡಿದ್ದಾರೆ.