ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ತರಬೇತಿ ಅವಶ್ಯ

blank

ಬೆಳಗಾವಿ: ಸಕ್ಕರೆಯ ಗುಣಮಟ್ಟ ಸುಧಾರಣೆಯಲ್ಲಿ ಕಬ್ಬಿನ ರಸದ ಶುದ್ಧೀಕರಣದ ಪಾತ್ರ ಬಹಳ ಪ್ರಮುಖವಾದದ್ದು, ಸಕ್ಕರೆ ಕಾರ್ಖಾನೆಯಲ್ಲಿನ ಸಿಬ್ಬಂದಿಗೆ ತರಬೇತಿ ಅವಶ್ಯವಾಗಿದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಹೇಳಿದರು.

blank

ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಿಂದ ಆರಂಭವಾದ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ರಸ ಶುದ್ಧೀಕರಣ ಮತ್ತು ಇವಾಪರೇಟರ್‌ನ ಮೂಲ ಪರಿಕಲ್ಪನೆ ಮತ್ತು ಆಧುನಿಕ ಬದಲಾವಣೆಗಳ ಕುರಿತು ಸಕ್ಕರೆ ಉತ್ಪಾದನಾ ವಿಭಾಗದ ಸಿಬ್ಬಂದಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆಗಳ ವಿವಿಧ ವಿಭಾಗದಲ್ಲಿ ಮಾನವ ಸಂಪನ್ಮೂಲದ ಅನಿವಾರ್ಯತೆ ಇರುತ್ತದೆ. ಅಲ್ಲದೆ, ಅವರಿಗೆ ಮೇಲಿಂದ ಮೇಲೆ ತರಬೇತಿ ನೀಡುವುದರಿಂದ ಗುಣಮಟ್ಟತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕಾರ್ಖಾನೆಯಿಂದ ಭಾಗವಹಿಸಿದ ಸಿಬ್ಬಂದಿಗೆ ಈ ಎರಡು ದಿನಗಳ ತರಬೇತಿ ಕಾರ್ಯಾಗಾರ ಸಂಪೂರ್ಣ ಲಾಭವನ್ನು ಪಡೆದು ತಮ್ಮ ಕಾರ್ಖಾನೆಯ ಸಕ್ಕರೆಯ ಗುಣಮಟ್ಟ ಸುಧಾರಿಸುವಲ್ಲಿ ಸಹಕಾರವಾಗುವುದಲ್ಲದೆ ಲಾಭದಾಯಕವಾಗಿ ಮುನ್ನಡೆಸಬಹುದು ಎಂದರು. ವರ್ಷದಿಂದ ವರ್ಷಕ್ಕೆ
ಕಬ್ಬು ಬೆಳೆಯುವ ಪ್ರದೇಶ ವಿಸ್ತರಣೆಯಾದಂತೆ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಉಪ ಉತ್ಪಾದನೆ ಹೆಚ್ಚಾಗುತ್ತಿದೆ. ಅಲ್ಲದೆ, ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಕಾರ್ಖಾನೆಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಹಾಗಾಗಿ ಸಕ್ಕರೆ ಕಾರ್ಖಾನೆಗಳು ತಮ್ಮ ಸಿಬ್ಬಂದಿ ನಿರಂತರ ತರಬೇತಿ ನೀಡುವುದು ಅವಶ್ಯವಾಗಿದೆ. ನುರಿತ ಸಿಬ್ಬಂದಿ ಸಕ್ಕರೆ ಕಾರ್ಖಾನೆಗಳಲ್ಲಿ ಗಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಸಲಹೆಗಾರ ಡಾ.ಎಂ.ಬಿ.ಲೋಂಡೆ, ಆರ್.ಬಿ.ಕುಲಕರ್ಣಿ, ಸುನೀಲ ಆಳಪ್ಪನವರು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ರಸ ಶುದ್ಧೀಕರಣ ಮತ್ತು ಇವಾಪರೇಟರ್‌ನ ಮೂಲ ಪರಿಕಲ್ಪನೆ ಮತ್ತು ಆಧುನಿಕ ಬದಲಾವಣೆಗಳ ಕುರಿತು ವಿವರವಾದ ಬೋಧನೆ ನೀಡಿದರು. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳ ಸುಮಾರು 45 ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
blank

ಸಕ್ಕರೆ ಪುಡಿಗೆ ಇದೊಂದನ್ನು ಮಿಕ್ಸ್​ ಮಾಡಿ ಇಟ್ಟರೆ ಸಾಕು ಇರುವೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Ants

Ants : ಮನೆಯಲ್ಲಿ ಇರುವೆಗಳ ಕಾಟದ ಕಿರಿಕಿರಿ ಅನುಭವಿಸದವರೇ ಇಲ್ಲ. ಮನೆ ಎಂದ ಮೇಲೆ ಇರುವೆಗಳು…

ನೀವು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ತಪ್ಪದೇ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ…Vitamin B12

Vitamin B12 : ವಿಟಮಿನ್ ಬಿ 12 ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ದೇಹದಲ್ಲಿ ಇದರ…

blank