ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ: ಓರ್ವನಿಗೆ ಗಂಭೀರ ಗಾಯ, ಬೆಳೆ ಹಾನಿ

ಮದ್ದೂರು: ಕೊಪ್ಪ ಬಳಿಯ ಎನ್​ಎಸ್​ಎಲ್​ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟಗೊಂಡು ಓರ್ವನಿಗೆ ಗಂಭೀರ ಗಾಯಗಳಾಗಿವೆ.

ಬಾಯ್ಲರ್​ ಸ್ಫೋಟದಿಂದ ಕಾಂಪೌಂಡ್​ ಛಿದ್ರವಾಗಿದೆ. ಬಾಯ್ಲರ್​ ಪಕ್ಕದಲ್ಲೇ ಇದ್ದ ಸುಮಾರು 10 ಎಕರೆಗೂ ಹೆಚ್ಚು ಜಮೀನಿಗೆ ಡಿಸ್ಟಿಲಿರಿ ನೀರು ನುಗ್ಗಿ ಬೆಳೆಹಾನಿಯಾಗಿದ್ದು ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

ಗಾಯಗೊಂಡ ಟೆಕ್ನೀಶಿಯನ್​ನ್ನು ವಿಮ್ಸ್​ ಆಸ್ಪತ್ರೆಗೆ ಸೇರಿಸಲಾಗಿದೆ. ಕೊಪ್ಪ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಖಾನೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.