ಮಾದರಿ ನಗರವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ

blank

ಚಿಕ್ಕಬಳ್ಳಾಪುರ : ನಗರದ ಅಭಿವೃದ್ಧಿಯ ವಿಚಾರದಲ್ಲಿ ಅರ್ಬನ್ ರೈಲು, ಮೆಟ್ರೋ ರೈಲು, ಹೊರ ವರ್ತುಲ ರಸ್ತೆ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಯ ಹಲವು ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಭರವಸೆ ನೀಡಿದರು.

blank

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಚಿಕ್ಕಬಳ್ಳಾಪುರವನ್ನು ಸ್ಮಾರ್ಟ್ ಸಿಟಿ, ಕ್ಲೀನ್ ಸಿಟಿ, ಸೇಫ್ ಸಿಟಿಯಾಗಿ ರೂಪಿಸಲಾಗುವುದು ಎಂದರು. ನಗರದಲ್ಲಿ ಪ್ರತಿನಿತ್ಯ ಕಸ ವಿಲೇವಾರಿ ಮಾಡಲು ಕ್ರಮ, ನಲ್ಲಿ ಮೂಲಕ ಶುದ್ಧ ನೀರು ವಿತರಿಸಲು ಕೇಂದ್ರದ ಜಲ ಜೀವನ್ ಮಿಷನ್ ಯೋಜನೆ ಸಮರ್ಪಕ ಅನುಷ್ಠಾನ, ಜತೆಗೆ ಬೆಂಗಳೂರಿಗೆ ಪರ್ಯಾಯವಾಗಿ ದೂರದ ನಗರಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದರು.

ಪ್ರಸ್ತುತ ಬೆಂಗಳೂರಿನ ಯಲಹಂಕದವರೆಗೂ ಬರುತ್ತಿರುವ ಸಬ್ ಅರ್ಬನ್ ರೈಲು, ದೇವನಹಳ್ಳಿಗೆ ಮೆಟ್ರೋ ಬಂದ ನಂತರ ಚಿಕ್ಕಬಳ್ಳಾಪುರಕ್ಕೆ ಸಂಚರಿಸುವಂತಾಗಲು ಮತ್ತು ನಗರದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಚಿಕ್ಕಬಳ್ಳಾಪುರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸಲಾಗುವುದು ಎಂದರು. ಚಿಕ್ಕಬಳ್ಳಾಪುರ ನಗರವನ್ನು ಬೆಂಗಳೂರಿಗೆ ಪರ್ಯಾಯವಾಗಿ ಉಪಗ್ರಹ ನಗರವಾಗಿ ರೂಪಿಸಲು ಈಗಾಗಲೇ ಅಗತ್ಯವಿರುವ ನೀಲಿನಕ್ಷೆ ಸಿದ್ಧವಾಗುತ್ತಿದೆ. ಮುಂಬರುವ ದಿನಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂದು ಅವರು ತಿಳಿಸಿದರು.

ನೀರಿನ ಸಮಸ್ಯೆಯೇ ಇಲ್ಲದ ಊರು: ಮೊದಲ ಬಾರಿಗೆ ಶಾಸಕರಾದ ವೇಳೆ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಮುಸ್ಟೂರಿನಲ್ಲಿ ಕೊರೆಸಲಾಗಿದೆ. ಕೊರೆಸಿದ ಅಷ್ಟೂ ಕೊಳವೆ ಬಾವಿಗಳೂ ಬತ್ತಿಹೋಗುತ್ತಿದ್ದ ಕಾರಣ ಆಗಲೇ ಕೆರೆಗಳಿಗೆ ನೀರು ಹರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಈಗಾಗಲೇ ಗ್ರಾಮದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲಾಗಿದೆ, ಜಕ್ಕಲಮಡಗು ಜಲಾಶಯದಿಂದ ಮುಸ್ಟೂರು ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ ಎಂದರು.

ಸುಳ್ಳು ಮೆಡಿಕಲ್ ಮೇಸ್ಟ್ರು: ಪಿಯುಸಿ ಓದಿ ಮೆಡಿಕಲ್ ಮೇಸ್ಟ್ರು ಎಂದು ಹೇಳಿಕೊಳ್ಳಲು ನಾಚಿಕೆಯಾಗಲ್ಲವೇ ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಛೇಡಿಸಿದ ಸುಧಾಕರ್, ಪಿಯುಸಿ ಓದಿದ ನೀವು ಮೆಡಿಕಲ್ ಮೇಸ್ಟ್ರು ಎನ್ನುವುದಾದರೆ ಪಿಎಚ್‌ಡಿ ಸೇರಿದಂತೆ ಉನ್ನತ ವ್ಯಾಸಂಗ ಮಾಡಿದವರ ಸ್ಥಿತಿ ಏನು? ಎಂದು ಪ್ರಶ್ನಿಸಿದರು. ಮೆಡಿಕಲ್ ಮೇಸ್ಟ್ರು ಎಂದು ಹೇಳಿಕೊಂಡಿರುವ ಬಗ್ಗೆ ಈವರೆಗೆ ಯಾರೂ ಪ್ರಕರಣ ದಾಖಲಿಸಿಲ್ಲ, ಸದ್ಯದಲ್ಲೇ ಪ್ರಕರಣ ದಾಖಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಸಚಿವರು, ಕ್ಷೇತ್ರಕ್ಕೆ ಮಾತುಗಾರ ಬೇಕಾ ಅಭಿವೃದ್ಧಿಯ ಕೆಲಸಗಾರ ಬೇಕಾ ಎಂಬುದನ್ನು ತೀರ್ಮಾನಿಸಬೇಕಾದ ಕಾಲ ಕೂಡಿ ಬಂದಿದೆ ಎಂದು ಹೇಳಿದರು.

ದೇಶದಲ್ಲಿಯೇ ಮೊದಲಿಗೆ ಆರೋಗ್ಯ ಸೇವೆ: ದೇಶದಲ್ಲಿಯೇ ಮೊದಲ ಬಾರಿಗೆ ಜನರ ಮನೆ ಬಾಗಿಲಿಗೇ ವೈದ್ಯರು ಬಂದು ಪರೀಕ್ಷೆ ಮಾಡುವ ಜತೆಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡುವ ಯೋಜನೆಯನ್ನು ಕ್ಷೇತ್ರದಲ್ಲಿ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶಾಂತಾ ಮೊಬೈಲ್ ಕ್ಲಿನಿಕ್ ಮನೆ ಮನೆಗೆ ಬರುತ್ತಿದೆ. ಉಚಿತ ತಪಾಸಣೆ, ಉಚಿತ ಔಷಧ, ಉಚಿತ ಚಿಕಿತ್ಸೆ ನೀಡುತ್ತಿದೆ. ಇಂತಹ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಇಲ್ಲ ಎಂದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank