More

    ಕಿಲ್ಲೆ ಮೈದಾನದ ದೇವತಾ ಸಮಿತಿ ಗಣೇಶೋತ್ಸವ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿ ನಿಧನ

    ಪುತ್ತೂರು: ಇತಿಹಾಸ ಪ್ರಸಿದ್ಧ ಕಿಲ್ಲೆ ಮೈದಾನದ ದೇವತಾ ಸಮಿತಿ ಗಣೇಶೋತ್ಸವ ಅಧ್ಯಕ್ಷ ಹಿರಿಯ ಕಾಂಗ್ರೇಸ್ ಮುಖಂಡ ಎನ್. ಸುಧಾಕರ್ ಶೆಟ್ಟಿ ಭಾನುವಾರ ನಿಧನರಾಗಿದ್ದಾರೆ.

    ಸುಧಾಕರ್ ಶೆಟ್ಟಿಯವರು 2016ರಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ದೇವಸ್ಥಾನದ ಧ್ವಜಸ್ತಂಭ ಹಾಗೂ ರಾಜಗೋಪುರದ ಸಮರ್ಪಣೆಯ ರುವಾರಿಯಾಗಿದ್ದರು. ದೇವತಾ ಸಮಿತಿಯ ಅಧ್ಯಕ್ಷರಾಗಿ ಕಳೆದ 40 ವರ್ಷಗಳಿಂದ ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ನಡೆಸಿಕೊಂಡು ಬರುತ್ತಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸರ್ಮಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು.

    ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 1999ಯಲ್ಲಿ ಮತ್ತು 2004 ರಲ್ಲಿ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1999ರಲ್ಲಿ ಬಿಜೆಪಿಯ ಡಿವಿ ಸದಾನಂದ ಗೌಡರು 62306 ಓಟ್ ಪಡೆದರೆ ಸುಧಾಕರ್ ಶೆಟ್ಟಿಯವರು 55013 ಓಟು ಪಡೆದಿದ್ದರು. 2004ರಲ್ಲಿ ಬಿಜೆಪಿಯ ಶಕುಂತಲ ಶೆಟ್ಟಿ 65119 ಓಟ್ ಪಡೆದರೆ 54007 ಓಟ್ ಪಡೆದು ಸೋಲನನ್ನುಭವಿಸಿದ್ದರು.

    ವಿದ್ಯಾರ್ಥಿ ದಿಸೆಯಿಂದಲೂ ಸಾಮಾಜಿಕ ಧಾರ್ಮಿಕ ರಾಜಕೀಯ, ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರು ನಗರದ ನೆಲ್ಲಿಕಟ್ಟೆಯ ನಿವಾಸಿಯಾಗಿದ್ದು ಸುದಾಣ್ಣ ಎಂದೇ ಪುತ್ತೂರಿನ ಜನತೆ ಕರೆಯುತ್ತಾರೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts