More

    ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ


    ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯ ರಥವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರೂ ಮತ್ತೊಮ್ಮೆ ಬಿಜೆಪಿ ಬೆಂಬಲಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
    ಮಂಚೇನಹಳ್ಳಿಯಲ್ಲಿ ಶನಿವಾರ ಪ್ರಚಾರ ನಡೆಸಿ ಮಾತನಾಡಿ, ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ, ಕೇವಲ ಮಾತುಗಳಿಗೆ ಕೆರೆಗಳಿಗೆ ನೀರು ಹರಿಯವುದಿಲ್ಲ. ಹಾಗಾಗಿ ಮಾತುಗಾರನಿಗೆ ಮಣೆ ಹಾಕದೆ, ಕೆಲಸಗಾರನಿಗೆ ಬೆಂಬಲ ನೀಡಬೇಕು ಎಂದರು.
    ಪ್ರಸ್ತುತ ಚುನಾವಣೆಯಲ್ಲಿ ಒತ್ತಡದ ಕಾರಣ ಕ್ಷೇತ್ರದ ಪ್ರತಿ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ಸಿನಿ ತಾರೆಯರು ಪ್ರತಿ ಗ್ರಾಮದ ಪ್ರತಿ ಮನೆಗೆ ತೆರಳಿ ನಮ್ಮ ಪರಮತ ಯಾಚನೆ ಮಾಡಿರುವುದು ಅಭಿನಂದನೀಯ ಎಂದು ಡಾ.ಕೆ.ಸುಧಾಕರ್ ಹೇಳಿದರು.

    ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮತ್ತು ಕೊಡುಗೆಗಳ ದೊಡ್ಡ ಪಟ್ಟಿ ಇದೆ. ಇದು ಕೇವಲ ಮಾತಿನಲ್ಲಿ ಹೇಳುವುದಲ್ಲ. ಪ್ರತಿಯೊಬ್ಬರಿಗೂ ಕಾಣಿಸುತ್ತಿದೆ. ಈ ಭಾಗದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೃಷ್ಟಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ, ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೆ, ಮನೆ ಮನೆಗೂ ಶಾಂತಾ ಮೊಬೈಲ್ ಕ್ಲಿನಿಕ್ ಸೇವೆ ಸೇರಿದಂತೆ ನಾನಾ ಯೋಜನೆಗಳು ಅನುಷ್ಠಾನಗೊಂಡಿವೆ. ವಸತಿರಹಿತರಿಗೆ ಸ್ವಂತ ಸೂರಿನ ಕನಸು ನನಸಾಗಿಸಲು ದಾಖಲೆ ಪ್ರಮಾಣದಲ್ಲಿ ನಿವೇಶನ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಎಚ್.ಎನ್.ವ್ಯಾಲಿಯ ಕೆರೆಗಳಿಗೆ, ಜಲ್ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಸುವ ಮೂಲಕ ಹಾಹಾಕಾರವನ್ನು ನೀಗಿಸಲಾಗಿದೆ ಎಂದರು.

    ಚುನಾವಣಾ ಪ್ರಚಾರಕ್ಕೆ ಸಿನಿ ತಾರೆಯರು ಬಂದು ಬೆಂಬಲಿಸುತ್ತಿರುವುದು ಖುಷಿಯ ವಿಚಾರ. ಮೇ 7 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಗರಕ್ಕೆ ಆಗಮಿಸುತ್ತಿದ್ದು ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದರು.
    ದುಪ್ಪಟ್ಟು ಮತಗಳ ಅಂತರದಿಂದ ಗೆಲ್ಲಿಸಿ:

    ಅಭಿವೃದ್ಧಿ ಕೆಲಸಗಳ ‘ಚಿಕ್ಕ’ಬಳ್ಳಾಪುರವನ್ನು ‘ದೊಡ್ಡ’ ಬಳ್ಳಾಪುರವನ್ನಾಗಿಸಿರುವ ಆರೋಗ್ಯ ಸಚಿವ ಸುಧಾಕರ್ ಒಳ್ಳೆತನ ಗೆಲ್ಲಬೇಕು ಎಂದು ನಟ ಸುದೀಪ್ ಮನವಿ ಮಾಡಿದರು.

    ಈ ಹಿಂದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಾಟಿ ಇಲ್ಲಿಗೆ ಬಂದಾಗ ಹಳ್ಳಿಗೆ ಹೋಗುವಂತೆ ಭಾಸವಾಗುತ್ತಿತ್ತು, ಆದರೆ, ಈಗ ಇಲ್ಲಿನ ವಾತಾವರಣವು ಅಭಿವೃದ್ಧಿ ಕೆಲಸಗಳಿಂದ ಬದಲಾಗಿದೆ. ಸುಧಾಕರ್ ಚಿಕ್ಕಬಳ್ಳಾಪುರವನ್ನು ದೊಡ್ಡ ನಗರವಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಉತ್ಸವ ಕೈಗೊಂಡ ಸಂದರ್ಭದಲ್ಲಿ ಸಂಭ್ರಮ ಮತ್ತು ಜನ ಬೆಂಬಲವು ರೋಮಾಂಚನಗೊಳಿಸಿತು. ಹಾಗೆಯೇ ಚುನಾವಣೆಯಲ್ಲೂ ಒಳ್ಳೆಯತನವನ್ನು ಬೆಂಬಲಿಸಿ, ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಅಗತ್ಯ ಸಹಕಾರ ನೀಡಬೇಕು ಎಂದರು.

    ಹಾಸ್ಯನಟ ಬ್ರಹ್ಮಾನಂದ ಮಾತನಾಡಿ, ಆರೋಗ್ಯ ಸಚಿವ ಸುಧಾಕರ್ ಅವರನ್ನು ಕಳೆದ ಬಾರಿಗಿಂತಲೂ ದುಪ್ಪಟ್ಟು ಮತಗಳ ಅಂತರದಿಂದ ಗೆಲ್ಲಿಸಬೇಕು. ಇದರಿಂದ ಜನರು ಗೆದ್ದಂತಾಗುತ್ತದೆ. ಇನ್ನು ಇಲ್ಲಿಯ ಜನ ಸುಧಾಕರ್ ಅವರ ಕೈ ಹಿಡಿಯುವವರೇ ಹೊರತು ಕೈ ಕೊಡುವವರಲ್ಲ ಎಂದರು.

    ಈಗಾಗಲೇ ಬಿಜೆಪಿ ಸರ್ಕಾರವು ಜನಪರ ಪ್ರಣಾಳಿಕೆ ಪ್ರಕಟಿಸಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಎಲ್ಲ ವರ್ಗದ ಹಿತ ಕಾಪಾಡುವ ನಿರ್ಧಾರಗಳನ್ನು ಘೋಷಿಸಲಾಗಿದೆ. ಮಾಸಾಶನ 2 ಸಾವಿರಕ್ಕೆ ಹೆಚ್ಚಳ, ವಾರ್ಷಿಕ ಮೂರು ಸಿಲಿಂಡರ್ ಮತ್ತು ಮನೆ ಮನೆಗೆ ಅರ್ಧ ಲೀಟರ್ ಹಾಲು ಉಚಿತವಾಗಿ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದು ಇದರಲ್ಲಿನ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುತ್ತದೆ ಎಂದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತಾಗಲು ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಬೇಕು. ಪ್ರಧಾನಿ ನರೇಂದ್ರ ಮೋದಿಯ ಮಹತ್ತರವಾದ ಯೋಜನೆಗಳನ್ನು ಈ ಭಾಗದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅಭಿವೃದ್ಧಿಗೆ ಪ್ರತಿಯೊಬ್ಬರೂ ಅಗತ್ಯ ಸಹಕಾರ ನೀಡಬೇಕು ಎಂದರು.

    ನಾನು ಓಡಾಡಿ ಕಪ್ಪಗಾದೆ: ಮಾಮನವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲಿನ ಒಲವಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿರುವೆ. ಹಲವೆಡೆ ನಿರಂತರವಾಗಿ ಓಡಾಡಿ ಕಪ್ಪಗಾದೆ ಎಂದು ಹೇಳುವ ಮೂಲಕ ನಟ ಕಿಚ್ಚ ಸುದೀಪ್ ಜನರನ್ನು ನಗಿಸಿದರು. ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಪರ ಪ್ರಚಾರ ಕೈಗೊಂಡ ಅವರು, ಹಲವು ಬಾರಿ ಜನರ ಎದುರು ರಾಜಕೀಯ ವಿಚಾರದ ಹಿನ್ನೆಲೆಯಲ್ಲಿ ಮಾತನಾಡುವ ಅರ್ಹತೆ ಇದೆಯೇ? ಎಂಬುದಾಗಿ ಸ್ವಯಂ ಪ್ರಶ್ನಿಸಿಕೊಂಡಿರುವೆೆ. ಆದರೆ, ಒಳ್ಳೆಯ ಮಾತನ್ನು ಜನರು ಕೇಳುತ್ತಾರೆ ಎಂಬ ಉದ್ದೇಶದಿಂದ ಚುನಾವಣಾ ಪ್ರಚಾರಕ್ಕೆ ಒಪ್ಪಿಕೊಂಡೆ ಎಂದರು.

    ಪ್ರಚಾರದಲ್ಲಿ ಕಿಕ್ಕಿರಿದ ಜನ: ನೆಚ್ಚಿನ ನಟ ಕಿಚ್ಚ ಸುದೀಪ್ ಮತ್ತು ಬ್ರಹ್ಮಾನಂದಂ ವೀಕ್ಷಣೆಗೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನಿರಂತರವಾಗಿ ಶಿಳ್ಳೆ, ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ಇದಕ್ಕೆ ಅನುಗುಣವಾಗಿ ಸಿನಿ ತಾರೆಯವರು ಡೈಲಾಗುಗಳನ್ನು ಹೊಡೆದು, ಹುರಿದುಂಬಿಸಿದರು.

    ಬಿಜೆಪಿಯಿಂದ ಜನಪರ ಪ್ರಣಾಳಿಕೆ: ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗಾಗಿ ರೈತರ ಹೆಸರನ್ನು ಕೇಂದ್ರ ಸರ್ಕಾರ ಕೇಳಿದರೆ ಕೇವಲ 17 ರೈತರ ಹೆಸರು ಕಳುಹಿಸಿದ ಕೀರ್ತಿ ರೈತ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts