ಕೊಡಗು ಪುನರ್​ನಿರ್ಮಾಣಕ್ಕೆ 25 ಕೋಟಿ ರೂ. ನೆರವು: ಸುಧಾಮೂರ್ತಿ

ಮೈಸೂರು: ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಕೊಡಗಿಗೆ ಇನ್ಫೋಸಿಸ್​ ಪ್ರತಿಷ್ಠಾನದ ವತಿಯಿಂದ 25 ಕೋಟಿ ರೂಪಾಯಿ ನೆರವು ನೀಡುವುದಾಗಿ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಘೋಷಿಸಿದರು.

ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಕೊಡಗಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಬಡವರಿಗೆ ಮನೆ ಕಟ್ಟಿಕೊಡಲು ಯೋಜನೆ ರೂಪಿಸಲಾಗಿದೆ. ಇದು ಕೊಡಗಿಗೆ ನಾವು ಮಾಡುತ್ತಿರುವ ಉಪಕಾರವಲ್ಲ, ಇದು ನಮ್ಮ ಕರ್ತವ್ಯ. ಜತೆಗೆ ಮೈಸೂರಿನ ಹೆಬ್ಬಾಳ ಕೆರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಹೆಮ್ಮೆಯ ಪ್ರತೀಕವಾದ, ಸಂಸ್ಕೃತಿಯ ಹೆಗ್ಗುರುತಾದ ದಸರಾ ಮಹೋತ್ಸವದ ಉದ್ಘಾಟನೆಗಾಗಿ ನನ್ನನ್ನು ಆಯ್ಕೆಮಾಡಿರುವುದು ನಮ್ಮ ಪೂರ್ವಜರ ಸುಕೃತವೆಂದೇ ನಾನು ತಿಳಿಯುತ್ತೇನೆ ಎಂದು ತಿಳಿಸಿದರು.