ಮನೆಯಲ್ಲಿದ್ದರೆ ಅಲ್ಲೇ ಕುಳಿತಿರಲಿ ಬಿಡಿ, ಬುದ್ಧಿ ಹೇಳುವ ವಿಚಾರವಿದಲ್ಲ ಎಂದು ಸುದೀಪ್​ ಹೇಳಿದ್ದೇಕೆ?

ಬೆಂಗಳೂರು: ಮತದಾನ ಮಾಡಿ ಎಂದು ಪ್ರತಿಯೊಬ್ಬರಿಗೂ ಬುದ್ಧಿ ಹೇಳುವುದಕ್ಕೆ ಆಗುವುದಿಲ್ಲ. ಮನೆಯಲ್ಲಿಯೇ ಕುಳಿತಿದ್ದರೆ ಅಲ್ಲೇ ಕುಳಿತಿರಲಿ ಬಿಡಿ ಎಂದು ನಟ ಸುದೀಪ್​​​​​​​​​​​​​ ಅವರು ಮತದಾನ ನಿರ್ಲಕ್ಷಿಸುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪುಟ್ಟೇನಹಳ್ಳಿ ಬೂತ್ ಸಂಖ್ಯೆ 13 ರಲ್ಲಿ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್​ ಅವರು ಮತದಾನ ಮಾಡಿದ ಬಳಿಕ ಮಾತನಾಡಿ, ಮತದಾನಕ್ಕೆ ಬನ್ನಿ ಎಂದು ಬುದ್ಧಿ ಹೇಳುವ ವಿಚಾರ ಅಲ್ಲ ಇದು. ಪ್ರತಿಯೊಬ್ಬರಿಗೂ ಅವರ ಜವಾಬ್ದಾರಿ ಅರ್ಥವಾಗಬೇಕು. ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.


ಪ್ರಚಾರಕ್ಕೆ ಹೋಗಲ್ಲ ಎಂದು ಹೇಳಿದ್ದೆ
ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಎರಡು ವರ್ಷದ ಹಿಂದೆ ಹೇಳಿದ್ದೆ, ಪ್ರೀತಿ ವಿಶ್ವಾಸದ ಮೇಲೆ ಪ್ರಚಾರಕ್ಕೆ ಹೋಗುತ್ತೇವೆ. ಜನ ನಮ್ಮ ಮೇಲಿನ ಪ್ರೀತಿಯಿಂದ ಮತ ಹಾಕುತ್ತಾರೆ. ಬಳಿಕ ಅಭ್ಯರ್ಥಿ ಕೆಲಸ ಮಾಡದಿದ್ದರೆ ಅದಕ್ಕೆ ನಾವು ಹೊಣೆಯಾಗಬೇಕಾಗುತ್ತದೆ. ಹಾಗಂತ ಅಭ್ಯರ್ಥಿಗೆ ನಮ್ಮ ಬೆಂಬಲ ಇಲ್ಲ ಎಂದಲ್ಲ. ಬೆಂಬಲ ಯಾವಾಗಲೂ ಇದ್ದೇ ಇದೆ, ಅದು ಅವರಿಗೂ ಗೊತ್ತು ಎಂದು ಸುದೀಪ್​​ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​​)

One Reply to “ಮನೆಯಲ್ಲಿದ್ದರೆ ಅಲ್ಲೇ ಕುಳಿತಿರಲಿ ಬಿಡಿ, ಬುದ್ಧಿ ಹೇಳುವ ವಿಚಾರವಿದಲ್ಲ ಎಂದು ಸುದೀಪ್​ ಹೇಳಿದ್ದೇಕೆ?”

  1. ಅತಿ ಬುದ್ಧಿವಂತರೆಂದು ತೋರಿಸಿಕೊಳ್ಳಲು ಹೀಗೆಲ್ಲಾ ಮಾತಾಡುತ್ತಾರೆ ಜನ. ಆ ಮನುಷ್ಯ ವಯೋವೃದ್ಧನಾದ ನಂತರ ಹಾಗೆ ಮಾತಾಡಲಿ. ಪ್ರಪಂಚದ ಆಗುಹೋಗುಗಳ ಬಗ್ಗೆ ಮತಿಹೀನರಾದಾಗ ಹೀಗೆಲ್ಲಾ ಮಾತಾಡುವುದು ಸಹಜ.

Leave a Reply

Your email address will not be published. Required fields are marked *